ನಾನು ಆರ್.ಎಸ್.ಎಸ್  ತತ್ವ , ಸಿದ್ಧಾಂತಕ್ಕೆ ತಲೆಬಾಗುತ್ತೇನೆ- ಸಿಎಂ ಬಸವರಾಜ ಬೊಮ್ಮಾಯಿ.

ಬೆಂಗಳೂರು,ಆಗಸ್ಟ್,15,2022(www.justkannada.in):  ನಾನು ಆರ್ ಎಸ್ ಎಸ್  ತತ್ವ , ಸಿದ್ಧಾಂತಕ್ಕೆ ತಲೆಬಾಗುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಬಿಜೆಪಿ ವತಿಯಿಂದ ಆಯೋಜಿಸಿದ್ದ ‘ಅಮೃತ ಭಾರತಿಗೆ ಕನ್ನಡದ ಆರತಿ, ಕರುನಾಡ ಜಾತ್ರೆ’  ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ,  ಆರ್​ಎಸ್​ಎಸ್​ ಬಗ್ಗೆ ನನಗೆ ತುಂಬಾ ಗೌರವವಿದೆ. ಆ ತತ್ವ ಸಿದ್ಧಾಂತದ ಆಧಾರದ ಮೇಲೆಯೇ ದೇಶ ಕಟ್ಟಲು ನಾವು ಬದ್ಧರಾಗಿದ್ದೇವೆ  ಎಂದರು.

ಇನ್ನು ನಾವು ಕೊಟ್ಟ ಜಾಹೀರಾತಿನಲ್ಲಿ ನೆಹರು ಫೋಟೊ ಹಾಕದಿದ್ದಕ್ಕೆ ಕಾಂಗ್ರೆಸ್​ ಗೆ ಬೇಸರವಾಗಿದೆ. ಜವಾಹರ್​​ ಲಾಲ್​​​ ನೆಹರೂ ಅವರ ಬಗ್ಗೆ ನಮಗೂ ಗೌರವ ಇದೆ. ಅವರನ್ನು ನಾವು ಮರೆತಿಲ್ಲ, ಅವರ ಕೆಲಸವನ್ನೂ ಮರೆತಿಲ್ಲ. ನೆಹರು ಅವರಿಗೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಗೌರವ ಕೊಟ್ಟಿದ್ದಾರೆ. ನೆಹರು ಅವರಿಂದ ಹಿಡಿದು ವಾಜಪೇಯಿ ಅವರವರೆಗೂ ಹಲವು ಪ್ರಧಾನಿಗಳು ತಮ್ಮ ಕಾಲಘಟ್ಟದಲ್ಲಿ ಕೊಟ್ಟ ಕೊಡುಗೆಗಳ ಪ್ರದರ್ಶನ ದೆಹಲಿಯಲ್ಲಿ ನಡೆದಿದೆ ಎಂದರು.

 

Key words: bow down – philosophy -ideology – RSS-CM Basavaraja Bommai.