Friday, September 11, 2026

BDA Apartments

O último dia de um condenado : Descubra, Guarde, Compartilhe BDA JK_Adv BDA Adv
Home Crime ಫಾಜಿಲ್ ಹತ್ಯೆಗೈದಿದ್ದ ಆರು ಆರೋಪಿಗಳ ಬಂಧನ: ಪೊಲೀಸ್ ಕಮಿಷನರ್ ಶಶಿಕುಮಾರ್ ಮಾಹಿತಿ.

ಫಾಜಿಲ್ ಹತ್ಯೆಗೈದಿದ್ದ ಆರು ಆರೋಪಿಗಳ ಬಂಧನ: ಪೊಲೀಸ್ ಕಮಿಷನರ್ ಶಶಿಕುಮಾರ್ ಮಾಹಿತಿ.

ಮಂಗಳೂರು,ಆಗಸ್ಟ್,1,2022(www.justkannada.in):  ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನ ಹೊರವಲಯದ ಸುರತ್ಕಲ್ ನಲ್ಲಿ ಫಾಜಿಲ್ ಎಂಬು ಯುವಕನನ್ನ ಹತ್ಯೆಗೈದಿದ್ದ ಆರೋಪಿಗಳನ್ನ ಬಂಧಿಸಲಾಗಿದೆ.

ಈ ಕುರಿತು ಸುದ್ಧಿಗೋಷ್ಠಿ ನಡೆಸಿ ಮಾಹಿತಿ ನೀಡಿರುವ ಮಂಗಳೂರು ಪೊಲೀಸ್ ಕಮಿಷನರ್ ಶಶಿ ಕುಮಾರ್, ಫಾಜಿಲ್ ಹತ್ಯೆ ಹಂತಕರನ್ನ ಬಂಧಿಸಲಾಗಿದೆ. ಸತತ ಕಾರ್ಯಾಚರಣೆ ಬಳಿಕ ಆರೋಪಿಗಳನ್ನ ಬಂಧಿಸಲಾಗಿದೆ. ಅಭಿಷೇಕ್,  ಶ್ರೀನವಾಸ್ ಕಾಟಿಪಳ್ಳ, ದೀಕ್ಷಿತ್ ಕಾಟಿಪಳ್ಳ ಸುಹಾಸ್ ಶೆಟ್ಟಿ, ಮೋಹನ್ ಗಿರಿಧರ್ ಬಂಧಿತ ಆರೋಪಿಗಳು. ಆರೋಪಿಗಳು ಕೃತ್ಯವೆಸಗಿದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ. ಬಂಧಿತ ಆರೋಪಿಗಳ ವಿಚಾರಣೆ ಮುಂದುರೆದಿದೆ ಎಂದರು.

ಕಾರಿನಲ್ಲಿ ಬಂದು ಫಾಜಿಲ್ ಮೇಲೆ ಹಲ್ಲೆ ಮಾಡಲಾಗಿದೆ.  ತೀವ್ರಗಾಯಗೊಂಡ ಫಾಜಿಲ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು. ಫಾಜಿಲ್ ಕೊಲೆಗೂ ಮುನ್ನ 2 ಕೊಲೆಯಾಗಿತ್ತು. ಪರಿಸ್ಥಿತಿ ನಿಭಾಯಿಸಲು ಮಂಗಳೂರಿನಾದ್ಯಂತ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ ಎಂದರು.

ಹತ್ಯೆಗೆ ಬಳಸಿದ್ದ ಕಾರು ವಶಕ್ಕೆ ಪಡೆಯಲಾಗಿದೆ. ಅಜಿತ್ ಕ್ಯಾಸ್ಟ್ರಾ ಎಂಬುವವರಿಗೆ ಸೇರಿದ್ದ ಕಾರು. ಹಣದ ಆಸೆಗಾಗಿ ಅಜಿತ್ ಕಾರು ಬಾಡಿಗೆ ನೀಡಿದ್ದು, ಹತ್ಯೆ ಬಗ್ಗೆ ವಿಷಯ ಮುಚ್ಚಿಟ್ಟಿದ್ದ ಎಂದು ಮಾಹಿತಿ ನೀಡಿದರು.

Key words: Fazil’s- murder -accused –arrested-Police Commissioner -Shashikumar.