Friday, October 30, 2026

Dasara Wishes

ಸೆ.30ರೊಳಗೆ ರೈತರ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳದಿದ್ರೆ ವಿಧಾನಸೌಧಕ್...
Happy Dasara
Home Cinema ಬಾಲಿವುಡ್ ಕರಾಳ ಮುಖಗಳನ್ನು ಬಯಲಿಗೆಳೆದ ನಟಿ ಮಲ್ಲಿಕಾ ಶೆರಾವತ್

ಬಾಲಿವುಡ್ ಕರಾಳ ಮುಖಗಳನ್ನು ಬಯಲಿಗೆಳೆದ ನಟಿ ಮಲ್ಲಿಕಾ ಶೆರಾವತ್

ಬೆಂಗಳೂರು, ಆಗಸ್ಟ್ 02, 2022 (www.justkannada.in): ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್  ಹಿಂದಿ ಚಿತ್ರರಂಗದ ಕೆಲವು ಕಹಿ ಸತ್ಯಗಳನ್ನು ಬಯಲಿಗೆ ಎಳೆದಿದ್ದಾರೆ.

ಕಾಸ್ಟಿಂಗ್​ ಕೌಚ್ ಬಗ್ಗೆ ಈಗಾಗಲೇ ಅನೇಕ ನಟಿಯರು ಮಾತನಾಡಿದ್ದಾರೆ. ಮಲ್ಲಿಕಾ ಶೆರಾವತ್​ ಅವರು ಇನ್ನಷ್ಟು ವಿವರಗಳನ್ನು ತೆರೆದಿಟ್ಟಿದ್ದಾರೆ.

‘ಒಬ್ಬ ಹೀರೋ ನಿಮಗೆ ಕರೆ ಮಾಡಿ ಮಧ್ಯರಾತ್ರಿ ಮನೆಗೆ ಬರಲು ಹೇಳುತ್ತಾನೆ. ನೀವು ಹೋಗದಿದ್ದರೆ ಅವರ ಸಿನಿಮಾದಿಂದ ನಿಮ್ಮನ್ನು ಹೊರಗೆ ಇಡಲಾಗುತ್ತದೆ’ ಎಂದು ಹೇಳಿದ್ದಾರೆ ಮಲ್ಲಿಕಾ ಶೆರಾವತ್.

ಬಹುಬೇಡಿಕೆಯ ನಟಿಯಾಗಿದ್ದ ಅವರು ನಂತರ ತೆರೆಮರೆಗೆ ಸರಿದರು. ಆ ರೀತಿ ಆಗಿದ್ದಕ್ಕೆ ಕಾರಣ ಏನು ಎಂದು ಅವರು ಈಗ ಬಾಯಿ ಬಿಟ್ಟಿದ್ದಾರೆ. ಈ ಮೂಲಕ ಹಿಂದಿ ಚಿತ್ರರಂಗದ ಕರಾಳ ಮುಖವನ್ನು ಅವರು ಬಯಲಿಗೆ ಎಳೆಯುವ ಪ್ರಯತ್ನ ಮಾಡಿದ್ದಾರೆ.