Friday, September 11, 2026

BDA Apartments

Home Cinema ನೂರು ಕೋಟಿ ಕ್ಲಬ್ ಸೇರಿದ ಕಿಚ್ಚ ಸುದೀಪ್ ‘ವಿಕ್ರಾಂತ್ ರೋಣ’

ನೂರು ಕೋಟಿ ಕ್ಲಬ್ ಸೇರಿದ ಕಿಚ್ಚ ಸುದೀಪ್ ‘ವಿಕ್ರಾಂತ್ ರೋಣ’

ಬೆಂಗಳೂರು, ಆಗಸ್ಟ್ 02, 2022 (www.justkannada.in): ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ನೂರು ಕೋಟಿ ಕ್ಲಬ್ ಸೇರಿದೆ.

ಹೌದು. ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಗಳಿಕೆಯಲ್ಲಿ ಭರ್ಜರಿ ದಾಖಲೆ ಮಾಡಿ ನೂರು ಕೋಟಿ ಗಳಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ.

ರಿಲೀಸ್ ಆದ ಮೊದಲ ದಿನವೇ 40 ಕೋಟಿ ಗೂ ಅಧಿಕ ಗಳಿಕೆ ಮಾಡಿದ್ದ ವಿಕ್ರಾಂತ್ ರೋಣ ಬಳಿಕವೂ ಥಿಯೇಟರ್ ನಲ್ಲಿ ಉತ್ತಮ ಪ್ರದರ್ಶನವನ್ನೇ ಕಾಣುತ್ತಿದೆ.

ಇದರೊಂದಿಗೆ ಮತ್ತೊಂದು ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ನೂರು ಕೋಟಿ ಕ್ಲಬ್ ಸೇರಿದ ದಾಖಲೆ ಮಾಡಿದೆ.

ಕನ್ನಡದ ಕೆಜಿಎಫ್, 777 ಚಾರ್ಲಿ ಬಳಿಕ ಈ ವರ್ಷ ಬಿಡುಗಡೆಯಾದ ಮತ್ತೊಂದು ಕನ್ನಡ ಸಿನಿಮಾ ನೂರು ಕೋಟಿ ಕ್ಲಬ್ ಸೇರಿ ಹೆಸರು ಮಾಡಿದೆ.