Tuesday, August 18, 2026

BDA Apartments

Home Front Page ಕೋವಿಡ್ ಮೀಟರ್: ದೇಶದಲ್ಲಿ 19,673 ಹೊಸ ಕೋವಿಡ್ ಸೋಂಕು ಪ್ರಕರಣ

ಕೋವಿಡ್ ಮೀಟರ್: ದೇಶದಲ್ಲಿ 19,673 ಹೊಸ ಕೋವಿಡ್ ಸೋಂಕು ಪ್ರಕರಣ

ಬೆಂಗಳೂರು, ಜುಲೈ 31, 2022 (www.justkannada.in): ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 19,673 ಹೊಸ ಸೋಂಕು ಪ್ರಕರಣಗಳು ದೃಢಪಟ್ಟಿವೆ.

ಕೇಂದ್ರ ಆರೋಗ್ಯ ಇಲಾಖೆ ಈ ಕುರಿತ ಬುಲೆಟಿನ್ ಪ್ರಕಟಿಸಿದ್ದು, ಕಳೆದ ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 19,673 ಹೊಸ ಸೋಂಕು ಪ್ರಕರಣಗಳು ವರದಿಯಾಗಿದ್ದು, 19, 336 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ.

ದೈನಂದಿನ ಸೋಂಕು ಸಕಾರಾತ್ಮಕ ದರ ಶೇ.4.96ರಷ್ಟಿದ್ದು, ವಾರದ ಸೋಂಕು ಸಕಾರಾತ್ಮಕ ದರ 4.88ರಷ್ಟಿದೆ. ದೇಶದಲ್ಲಿ ಪ್ರಸ್ತುತ ಸಕ್ರಿಯ ಪ್ರಕರಣಗಳ ಪ್ರಮಾಣ ಶೇ.0.33ರಷ್ಟು ಅಂದರೆ 1, 43, 676ರಷ್ಟಿದೆ.

ಈ ಮೂಲಕ ದೇಶದಲ್ಲಿ ಕೋವಿಡ್-19 ಸೋಂಕು ಪ್ರಸರಣ ಏರಿಳಿತ ಮುಂದುವರೆದಿದೆ.