Wednesday, August 5, 2026

BDA Apartments

Home Front Page ಸ್ವಪಕ್ಷ ಸರಕಾರದ ವಿರುದ್ಧವೇ ಕಿಡಿಕಾರಿದ ಬಿಜೆಪಿ ಶಾಸಕ ಹರ್ಷವರ್ಧನ್

ಸ್ವಪಕ್ಷ ಸರಕಾರದ ವಿರುದ್ಧವೇ ಕಿಡಿಕಾರಿದ ಬಿಜೆಪಿ ಶಾಸಕ ಹರ್ಷವರ್ಧನ್

ಮೈಸೂರು,ಜುಲೈ,30,2022(www.justkannada.in):  ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ನಡೆಯುತ್ತಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಬಿಜೆಪಿ ಶಾಸಕ ಹರ್ಷವರ್ಧನ್  ಸ್ವಪಕ್ಷ ಸರಕಾರದ ವಿರುದ್ಧವೇ ಕಿಡಿಕಾರಿದ್ದಾರೆ.

ಮೈಸೂರಿನಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಮಾತನಾಡಿದ ಶಾಸಕ ಹರ್ಷವರ್ಧನ್, ಯಾವುದೇ ಸರ್ಕಾರವಾಗಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕು.ಜನರ ಜೀವ ಉಳಿಸಲು ಕ್ರಮ ಕೈಗೊಳ್ಳಬೇಕು. ಅದು ಸಾಧ್ಯವಾಗದೆ ಇದ್ದರೆ ಅಂತಹ ಸರಕಾರ ಇದ್ದರಷ್ಟು ಹೋದರೆಷ್ಟು ಎಂದು ಹರಿಹಾಯ್ದಿದ್ದಾರೆ.

ಸರ್ಕಾರದ ರಚನೆಗೆ ನಮ್ಮ ಪಕ್ಷದ ಕಾರ್ಯಕರ್ತರ ಬೆವರು, ಶ್ರಮವಿದೆ. ಇದರ ಜೊತೆಗೆ ರಕ್ತ ಬೆರಸುವುದು ಬೇಡ.ಸಿಎಂ ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ನಂಜನಗೂಡು, ಗುಂಡ್ಲುಪೇಟೆ ಕ್ಷೇತ್ರ ಕೂಡ ಕೇರಳದ ಗಡಿ ಭಾಗ ಇದೆ. ಈ ಭಾಗಗಳಲ್ಲೂ ಇಂತಹ ಘಟನೆ ನಡೆಯಲ್ಲ ಎಂಬುದಕ್ಕೆ ಗ್ಯಾರಂಟಿ ಏನು..? ಇಂತಹ ದುಷ್ಟ ಶಕ್ತಿಗಳನ್ನು ಸರ್ಕಾರ ಸಮರ್ಥವಾಗಿ ಮಟ್ಟಹಾಕ ಬೇಕು ಎಂದು ಸಲಹೆ ನೀಡಿದ್ದಾರೆ.

Key words: mysore-bjp-MLA-Harshavardhan