Sunday, August 9, 2026

BDA Apartments

Home Front Page ಪತ್ರಕರ್ತರ ಮೇಲೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ರಿಂದ ಹಲ್ಲೆ.

ಪತ್ರಕರ್ತರ ಮೇಲೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ರಿಂದ ಹಲ್ಲೆ.

ಕೋಲಾರ,ಜುಲೈ29,2022(www.justkannada.in): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಟ್ಟುಹಬ್ಬದ ಪೂರ್ವಬಾವಿ ಸಭೆಯಲ್ಲಿ  ಕಾಂಗ್ರೆಸ್ ಗಲಾಟೆಯ ದೃಶ್ಯ ಸೆರೆ ಹಿಡಿಯವ ವೇಳೆ ಪತ್ರಕರ್ತರ ಮೇಲೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಕೋಲಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ  ಈ ಘಟನೆ ನಡೆದಿದೆ. ಇಬ್ಬರು ಪತ್ರಕರ್ತರ ಮೇಲೆ  ರಮೇಶ್ ಕುಮಾರ್ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಟ್ಟುಹಬ್ಬದ ಪೂರ್ವಬಾವಿ ಸಭೆಯಲ್ಲಿ ರಮೇಶ್ ಕುಮಾರ್ ಹಾಗೂ ಕೆ.ಎಚ್ ಮುನಿಯಪ್ಪ ಬಣದವರ ನಡುವೆ ಕಿತ್ತಾಟವಾಗಿ ಕಾರ್ಯಕರ್ತರು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದರು.

ಬ್ಯಾನರ್ ನಲ್ಲಿ ಮುನಿಯಪ್ಪ ಫೋಟೋ ಇಲ್ಲದಿದಕ್ಕೆ ಬೆಂಬಲಿಗರು ಪ್ರಶ್ನಿಸಿದ್ದು  ಬಳಿಕ ಎರಡು ಬಣದವರ ನಡುವೆ ಮಾತಿಗೆ ಮಾತು ಬೆಳೆದು  ಗಲಾಟೆಯಾಗಿದೆ. ಇನ್ನು ಇಬ್ಬರು ಪತ್ರಕರ್ತರು ಗಲಾಟೆಯ ದೃಶ್ಯ ಮೊಬೈಲ್ ನಲ್ಲಿ ಸೆರೆ ಮಾಡುತ್ತಿದಕ್ಕೆ ಕೋಪಗೊಂಡ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಪತ್ರಕರ್ತರ ಮೇಲೆ ಮಾಡಿ,ಸಭೆಯಿಂದ ನಡೆದಿದ್ದಾರೆ. ರಮೇಶ್ ಕುಮಾರ್ ನಡೆಯ ವಿರುದ್ಧ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಕ್ರೋಶ ವ್ಯಕ್ತಪಡಿಸಿದೆ.

Key words: Former speaker -Ramesh Kumar- assult-journalists.