Thursday, September 17, 2026

BDA Apartments

ಬಕೆಟ್ ರಾಜಕಾರಣವನ್ನು ಸಿ.ಟಿ ರವಿ ಅವರನ್ನ ನೋಡಿ ಕಲಿಯಬೇಕು : ಶಾಸಕ ಜಮೀರ್ ಅಹ್ಮ...
Home Front Page ಬಕೆಟ್ ರಾಜಕಾರಣವನ್ನು ಸಿ.ಟಿ ರವಿ ಅವರನ್ನ ನೋಡಿ ಕಲಿಯಬೇಕು : ಶಾಸಕ ಜಮೀರ್ ಅಹ್ಮದ್ ಖಾನ್...

ಬಕೆಟ್ ರಾಜಕಾರಣವನ್ನು ಸಿ.ಟಿ ರವಿ ಅವರನ್ನ ನೋಡಿ ಕಲಿಯಬೇಕು : ಶಾಸಕ ಜಮೀರ್ ಅಹ್ಮದ್ ಖಾನ್ ತಿರುಗೇಟು

ಚಿತ್ರದುರ್ಗ,ಜುಲೈ,26,2022(www.justkannada.in): ಸಿ.ಟಿ ರವಿ ಅವರು 2007ರಲ್ಲಿ ಎಲ್ಲಿ ಬಂದು ಯಾರ ಬಳಿ ಮತ್ತು ಯಾವುದಕ್ಕಾಗಿ ಬಕೆಟ್ ಹಿಡಿದರು ಎಂಬುದನ್ನು ಮೊದಲು ನೆನಪಿಸಿಕೊಳ್ಳಲಿ. ಮತ್ತೊಬ್ಬರಿಗೆ ಬಕೆಟ್ ರಾಜಕಾರಣಿ ಎಂದು ಹೇಳುವ ನೈತಿಕತೆಯೇ ಅವರಿಗಿಲ್ಲ ಎಂದು ಚಾಮರಾಜಪೇಟೆ ಶಾಸಕರು ಮತ್ತು ಮಾಜಿ ಸಚಿವರಾದ ಬಿ ಜೆಡ್ ಜಮೀರ್ ಅಹ್ಮದ್ ಖಾನ್ ತಿರುಗೇಟು ನೀಡಿದ್ದಾರೆ.

ಚಿತ್ರದುರ್ಗದಲ್ಲಿ ಸಿದ್ದರಾಮಯ್ಯ ಅವರ ಕಾರ್ಯಕ್ರಮದ ಪ್ರಯುಕ್ತ ಪೂರ್ವ ಭಾವಿ ಸಭೆಯಲ್ಲಿ ಪಾಲ್ಗೊಂಡು, ಜಿಲ್ಲೆಯ ಕಾಂಗ್ರೆಸ್ ಕಛೇರಿಗೆ ಭೇಟಿ ನೀಡುವ ವೇಳೆ, ಅವರು ಪತ್ರಕರ್ತರ ಜೊತೆ ಮಾತನಾಡಿದರು.

ನಾನು ಒಕ್ಕಲಿಗರ ಬಗ್ಗೆ ಏನಾದರೂ ತಪ್ಪಾಗಿ ಮಾತನಾಡಿದ್ದರೆ, ತೋರಿಸಲಿ. ತಪ್ಪಿದ್ದರೆ ಕ್ಷಮೆ ಕೇಳುತ್ತೇನೆ. ನಿನ್ನೆಯೇ ನಾನು ಬಿಡಿಸಿ ಹೇಳಿದ್ದೇನೆ. ಹೆಚ್ ಡಿ ದೇವೇಗೌಡರೇ ನನ್ನ ರಾಜಕೀಯ ಗುರುಗಳು. ನಾನು ಒಕ್ಕಲಿಗರ ನಡುವೆ ಬೆಳೆದಿರುವ ಹುಡುಗ. ಉಪ ಚುನಾವಣೆ ವೇಳೆ  ದೇವೇಗೌಡರು ನನಗಾಗಿ ಹಗಲು ರಾತ್ರಿ ಶ್ರಮಿಸಿದ್ದಾರೆ. 2023 ರ ಚುನಾವಣೆಗಾಗಿ ನನ್ನ ವಿರುದ್ಧ ಹೀಗೆ ಇಲ್ಲದ ಗಿಮಿಕ್ ಮಾಡಲಾಗುತ್ತಿದೆ. ಸಿ.ಟಿ ರವಿ ಅವರಿಗೆ ಮತ್ತೊಬ್ಬರನ್ನು ಬಕೆಟ್ ರಾಜಕಾರಣಿ ಎಂದು ಕರೆಯುವ ನೈತಿಕತೆಯೇ ಇಲ್ಲ.  2007ರಲ್ಲಿ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ, ಸದಾಶಿವನಗರದ ಗೆಸ್ಟ್ ಹೌಸಿಗೆ ಬಂದು ಯಾರ ಬಳಿ, ಯಾವುದಕ್ಕಾಗಿ ಬಕೆಟ್ ಹಿಡಿದರು ಎಂಬುದಕ್ಕೆ ನಾನೇ ಸಾಕ್ಷಿ ಇದ್ದೇನೆ‌. ಮೊದಲು ಅದನ್ನು ನೆನಪಿಸಿಕೊಳ್ಳಲಿ. ಬಕೆಟ್ ರಾಜಕಾರಣವನ್ನು ಅವರನ್ನು ನೋಡಿ ಕಲಿಬೇಕು ಎಂದು ಟಾಂಗ್ ನೀಡಿದರು.

ಎಲ್ಲ ರಾಜಕಾರಣಿಗಳಿಗೂ ಅಧಿಕಾರದ ಆಸೆ ಇರುತ್ತದೆ. ಹಾಗಂತ ನಾವು ಬಿಜೆಪಿ ನಾಯಕರಂತೆ ಜಾತಿ ರಾಜಕಾರಣ ಮಾಡಲು ಹೋಗುವುದಿಲ್ಲ. ನನಗೆ ಹೈಕಮಾಂಡ್ ಯಾವುದೇ ನೋಟೀಸ್ ನೀಡಿಲ್ಲ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ. ಸುರ್ಜೇವಾಲ ಅವರು ಮಾತ್ರ ದೂರವಾಣಿ ಕರೆ ಮಾಡಿ, ಪಕ್ಷಕ್ಕೆ ಡ್ಯಾಮೇಜ್ ಆಗುವ ಹೇಳಿಕೆ ನೀಡಬೇಡಿ. ಇದೆಲ್ಲ ಬೇಡ, ಇಲ್ಲಿಗೇ ನಿಲ್ಲಿಸಿ ಅಂದಿದ್ದಾರೆ. ನಾವು ಸುಮ್ಮನಾಗಿದ್ದೇವೆ ಅಷ್ಟೇ ಎಂದು ಅವರು ಹೇಳಿದರು.

ಸಿದ್ಧರಾಮಯ್ಯ ಬಿಟ್ಟು ಬೇರೆ ಯಾರೇ ಸಿಎಂ ಆದ್ರೂ ನಮ್ಮ ಸಮುದಾಯ ಬೆಳವಣಿಗೆ ಆಗಲ್ಲ.

ಇದಕ್ಕೂ ಮುನ್ನ ದಾವಣಗೆರೆಯಲ್ಲಿ ಮಾತನಾಡಿದ ಶಾಸಕ ಜಮೀರ್ ಅಹ್ಮದ್ ಖಾನ್, ಸಿದ್ದರಾಮಯ್ಯ ಪರ ಭರ್ಜರಿ ಬ್ಯಾಟಿಂಗ್ ಮಾಡಿದರು. ಸಿದ್ದರಾಮಯ್ಯ ಪರ ಇಡೀ ಮುಸ್ಲೀಂ ಸಮುದಾಯ ನಿಲ್ಲುವಂತೆ ಕರೆ ನೀಡಿದರು.  ಸಿದ್ಧರಾಮಯ್ಯ ಮುಂದಿನ ಸಿಎಂ ಆಗಬೇಕು . ಬೇರೆ ಯಾರೇ ಸಿಎಂ ಆದ್ರೂ ನಮ್ಮ ಸಮುದಾಯ ಬೆಳವಣಿಗೆ ಆಗಲ್ಲ. ಮುಂದಿನ ಸಿಎಂ ಸಿದ್ದರಾಮಯ್ಯ ಅವರೇ ಆಗಬೇಕು. ಸಿದ್ದರಾಮಯ್ಯ ಒಬ್ಬರೇ ಮುಸ್ಲೀಂ ಪರ ಇರೋ ನಾಯಕ. ಸಿದ್ದರಾಮಯ್ಯ  ಒಂದು ರೀತಿ ಸಿಂಹ ಇದ್ದ ಹಾಗೆ. ಟಿಪ್ಪು ಜಯಂತಿ ಮಾಡಿದ್ದು, ಶಾದಿ ಭಾಗ್ಯ ಅನ್ನಭಾಗ್ಯ ಜಾರಿಗೆ ತಂದಿದ್ದು ಅವರೇ.  ಅಲ್ಪಸಂಖ್ಯಾತರಿಗಾಗಿ 3 ಸಾವಿರ ಕೋಟಿ ಕೊಟ್ಟಿದ್ದರು.  ಇಂತಹ ಮನುಷ್ಯನನ್ನ ಕಳೆದುಕೊಳ್ಳಬೇಕಾ. ಇದು ಸಿದ್ದು ಬರ್ತಡೇ ಅಲ್ಲ ನಮ್ಮ ಬರ್ತಡೆಯಂತೆ ಎಂದು ಜಮೀರ್ ತಿಳಿಸಿದರು.

Key words: Bucket -politics – learned – CT Ravi- MLA- Zameer Ahmed Khan