Friday, September 11, 2026

BDA Apartments

Home Cinema ಆಗಸ್ಟ್ 6ರಿಂದ ‘ಬಿಗ್ ಬಾಸ್ ಒಟಿಟಿ’ ಆರಂಭ

ಆಗಸ್ಟ್ 6ರಿಂದ ‘ಬಿಗ್ ಬಾಸ್ ಒಟಿಟಿ’ ಆರಂಭ

ಬೆಂಗಳೂರು, ಜುಲೈ 23, 2022 (www.justkannada.in):

ಬಿಗ್ ಬಾಸ್ ಮುಂದಿನ ಸೀಸನ್ ಯಾವಾಗ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಆಗಸ್ಟ್‌ 6ರಿಂದ ಸಂಜೆ 7ಗಂಟೆಗೆ ಬಿಗ್‌ ಬಾಸ್‌ ಒಟಿಟಿ ಆರಂಭವಾಗಲಿದೆ. 24 ಗಂಟೆ ನೇರಪ್ರಸಾರದೊಂದಿಗೆ ಮೊದಲ ಬಾರಿಗೆ ಈ ರಿಯಾಲಿಟಿ ಶೋ ಬರಲಿದೆ.

ಒಟಿಟಿ ಬಿಗ್‌ ಬಾಸ್‌ ಆಗಿರುವುದರಿಂದ ನಟ ಸುದೀಪ್ ಇದನ್ನು ಮೊದಲ ಸೀಸನ್‌, ಒಂಬತ್ತನೇ ಸೀಸನ್‌ ಅಲ್ಲ ಎಂದು ಪ್ರೋಮೋದಲ್ಲಿ ಹೇಳಿದ್ದಾರೆ.

ಅಂದಹಾಗೆ ಆರು ವಾರಗಳ ಸಂಪೂರ್ಣ ಮನರಂಜನೆಯನ್ನು ಪ್ರೇಕ್ಷಕರು ಪಡೆಯಬಹುದಾಗಿದೆ.

ಎಂದಿನಂತೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಬಿಗ್‌ಬಾಸ್‌ ಸೀಸನ್ ಹೋಸ್ಟ್‌ ಮಾಡಲಿದ್ದಾರೆ. ಪ್ರೇಕ್ಷಕರು ಕಿಚ್ಚನನ್ನು ನೋಡಲು ಕಾತುರದಿಂದ ಕಾದುಕುಳಿತಿದ್ದಾರೆ.