Thursday, August 13, 2026

BDA Apartments

Home Front Page ಮಡಿಕೇರಿ: ಕೊಡಗು ಜಿಲ್ಲಾಧಿಕಾರಿ ಕಚೇರಿ ಕುಸಿಯುವ ಭೀತಿ, ಸಂಚಾರ ಮಾರ್ಗ ಬದಲು

ಮಡಿಕೇರಿ: ಕೊಡಗು ಜಿಲ್ಲಾಧಿಕಾರಿ ಕಚೇರಿ ಕುಸಿಯುವ ಭೀತಿ, ಸಂಚಾರ ಮಾರ್ಗ ಬದಲು

ಬೆಂಗಳೂರು, ಜುಲೈ 17, 2022 (www.justkannada.in): ಮಡಿಕೇರಿ- ಮಂಗಳೂರು ರಸ್ತೆಯಲ್ಲಿರುವ ಜಿಲ್ಲಾಧಿಕಾರಿ ಕಚೇರಿಯ ತಡೆಗೋಡೆಯ ಸ್ಲ್ಯಾಬ್‌ಗಳು ಹೊರಚಾಚಿದ್ದು, ಕಳಚಿ ಬೀಳುವ ಆತಂಕ ಮೂಡಿದೆ.

ಕಳಚಿ ಬೀಳುವ ಮುನ್ನೆಚ್ಚರಿಕೆಯಿಂದ ಮಡಿಕೇರಿಯಿಂದ ಮಂಗಳೂರು ದಾರಿಯಲ್ಲಿ ತೆರಳುವವರು ಮೇಕೇರಿ- ಅಪ್ಪಂಗಳ- ತಾಳತ್ತಮನೆ ಜಂಕ್ಷನ್ ಮಾರ್ಗದಲ್ಲಿ ಸಂಚರಿಸಬೇಕಿದೆ.

ಕಳೆದ ಒಂದು ವಾರದಿಂದಲೂ ಸ್ಲ್ಯಾಬ್‌ಗಳು ಹೊರಚಾಚಿದ್ದವು. ತಡೆಗೋಡೆ ಕುಸಿದು ಬೀಳುವುದಿಲ್ಲ ಒಳಗೆ ನೀರು ಸೇರಿರುವುದರಿಂದ ಸ್ಲ್ಯಬ್ ಗಳು ಹೊರಚಾಚಿವೆ ಎಂದು ಅಧಿಕಾರಿಗಳು ಪ್ರತಿಪಾದಿಸಿದ್ದರು.

ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಡೆಗೋಡೆಗೆ ಪೈಪ್ ತೂರಿಸಿ ಮೋಟಾರ್ ಬಳಸಿ ನೀರನ್ನು ಹೊರತೆಗೆಯುವ ಪ್ರಯತ್ನವನ್ನೂ ನಡೆಸಿದ್ದರು. ಆದರೆ, ಸ್ಲ್ಯಾಬ್ ಗಳ ಹೊರಚಾಚುವಿಕೆ ಮುಂದುವರಿದಿರುವುದು ಆತಂಕಕ್ಕೆ ಕಾರಣವಾಗಿದೆ‌.