Sunday, August 23, 2026

BDA Apartments

Home Crime ಭ್ರಷ್ಟಾಚಾರ ಆರೋಪ: ಎಸಿಬಿಯಿಂದ ಐಎಎಸ್ ಅಧಿಕಾರಿ ಜೆ. ಮಂಜುನಾಥ್ ಬಂಧನ.

ಭ್ರಷ್ಟಾಚಾರ ಆರೋಪ: ಎಸಿಬಿಯಿಂದ ಐಎಎಸ್ ಅಧಿಕಾರಿ ಜೆ. ಮಂಜುನಾಥ್ ಬಂಧನ.

ಬೆಂಗಳೂರು,ಜುಲೈ,4,2022(www.justkannada.in):  ಭ್ರಷ್ಟಾಚಾರದ ಆರೋಪ  ಮೇಲೆ ಐಎಎಸ್ ಅಧಿಕಾರಿ ಜೆ.ಮಂಜುನಾಥ್ ಅವರನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ಬೆಂಗಳೂರು ನಗರ ಡಿಸಿ ಕಚೇರಿ ಮೇಲೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಂಜುನಾಥ್ ಅವರನ್ನು ಯಶವಂತಪುರದಲ್ಲಿರುವ ಅವರ ನಿವಾಸದಲ್ಲಿ ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಇಂಟಿಗ್ರೇಟೆಡ್ ಚೈಲ್ಡ್ ಪ್ರೊಟೆಕ್ಷನ್ ಸ್ಕೀಂ ಡೈರೆಕ್ಟರ್ ಆಗಿ ಮಂಜುನಾಥ್‌ ವರ್ಗಾವಣೆಗೊಂಡಿದ್ದರು.

ಮಂಜುನಾಥ್‌ ವಿರುದ್ಧ ಭೂವ್ಯಾಜ್ಯ ಸಂಬಂಧ ಲಂಚ ಪಡೆದ ಆರೋಪ ಕೇಳಿ ಬಂದಿತ್ತು. ಕೆಳ ಹಂತದ ಅಧಿಕಾರಿಗಳ ಮೂಲಕ ಲಂಚ ಪಡೆದಿರುವ ಆರೋಪ ಅವರ ವಿರುದ್ಧ ಕೇಳಿಬಂದಿದ್ದು, ಪ್ರಕರಣದಲ್ಲಿ ಮೂರನೇ ಆರೋಪಿಯಾಗಿದ್ದಾರೆ.

ಡಿಸಿ ಕಚೇರಿಯಲ್ಲಿಯೇ ಆಪ್ತನಿಂದ ಲಂಚ ಪಡೆದಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಎಸಿಬಿ ಅಧಿಕಾರಿಗಳು ಬೆಂಗಳೂರು ನಗರ ಡಿಸಿ ಕಚೇರಿ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಜೆ.ಮಂಜುನಾಥ್ ಜಿಲ್ಲಾಧಿಕಾರಿಯಾಗಿದ್ದರು.

 

Key words: Alleged –corruption- IAS officer –J.Manjunath.