Sunday, September 13, 2026

BDA Apartments

ಬಾಗಲಕೋಟೆ ಜಿಲ್ಲೆಯಲ್ಲಿ 63 ಗ್ರಾಮಗಳು ಮುಳುಗಡೆ: ಸರ್ಕಾರದಿಂದ 10ಕೋಟಿ ಬಿಡುಗಡೆ...
Home Front Page ಬಾಗಲಕೋಟೆ ಜಿಲ್ಲೆಯಲ್ಲಿ 63 ಗ್ರಾಮಗಳು ಮುಳುಗಡೆ: ಸರ್ಕಾರದಿಂದ 10ಕೋಟಿ ಬಿಡುಗಡೆ-ಸಿಎಂ ಬಿಎಸ್ ಯಡಿಯೂರಪ್ಪ ಮಾಹಿತಿ..

ಬಾಗಲಕೋಟೆ ಜಿಲ್ಲೆಯಲ್ಲಿ 63 ಗ್ರಾಮಗಳು ಮುಳುಗಡೆ: ಸರ್ಕಾರದಿಂದ 10ಕೋಟಿ ಬಿಡುಗಡೆ-ಸಿಎಂ ಬಿಎಸ್ ಯಡಿಯೂರಪ್ಪ ಮಾಹಿತಿ..

ಬಾಗಲಕೋಟೆ,ಆ,9,2019(www.justkannada.in): ಭಾರಿ ಮಳೆ ಪ್ರವಾಹದಿಂದಾಗಿ ಬಾಗಲಕೋಟೆ ಜಿಲ್ಲೆಯಲ್ಲಿ 63 ಗ್ರಾಮಗಳು ಮುಖುಗಡೆಯಾಗಿದ್ದು, ಪರಿಹಾರ ಕಾರ್ಯಕ್ಕೆ ಜಿಲ್ಲೆಗೆ ಸರ್ಕಾರದಿಂದ 10 ಕೋಟಿ ರೂ ಬಿಡುಗಡೆ ಮಾಡಲಾಗಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು.

ಬಾಗಲಕೋಟೆ ಮುಧೋಳದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಬಿ.ಎಸ್ ಯಡಿಯೂರಪ್ಪ, ಬಾಗಲಕೋಟೆ ಜಿಲ್ಲೆಯಲ್ಲಿ ಈವರೆಗೆ 6381 ಕುಟುಂಬಗಳ 28,126 ಜನರನ್ನ ಸ್ಥಳಾಂತರಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 42 ಪರಿಹಾರ ಕೇಂದ್ರಗಳನ್ನ ತೆರೆಯಲಾಗಿದೆ. ಇನ್ನು 19,366 ಜಾನುವಾರುಗಳನ್ನ ರಕ್ಷಿಸಲಾಗಿದೆ. ಹಾಗೆಯೇ ಸುಮಾರು 10ಸಾವಿರ ಹೆಕ್ಟೆರ್ ಪ್ರದೇಶ ಮುಳುಗಡೆಯಾಗಿದೆ ಎಂದು ಮಾಹಿತಿ ನೀಡಿದರು.

ಈ ನಡುವೆ ಜಿಲ್ಲೆಗೆ ಸರ್ಕಾರದಿಂದ 10 ಕೋಟಿ ನೀಡಲಾಗಿದೆ. ಸುಧಾಮೂರ್ತಿ ಅವರು ಸಿಎಂ ಪರಿಹಾರನಿಧಿಗೆ 10 ಕೋಟಿ ನೀಡಿದ್ದಾರೆ ಎಂದು ಬಿಎಸ್ ವೈ ತಿಳಿಸಿದರು.

Key words: 63 villages -sunk -Bagalkot district- 10 crore- release – CM BS Yeddyurappa.