Thursday, October 1, 2026

BDA Apartments

ಅಮೇಜಾನ್‌ : ರಿಯಾಯತಿ ದರದಲ್ಲಿ ಮಾರಾಟ..! BDA JK_Adv BDA Adv
Home Front Page ಕ್ರಿಕೆಟ್: ಇಂದು ಭಾರತ-ವಿಂಡೀಸ್ ಮೊದಲ ಏಕದಿನ ಪಂದ್ಯ

ಕ್ರಿಕೆಟ್: ಇಂದು ಭಾರತ-ವಿಂಡೀಸ್ ಮೊದಲ ಏಕದಿನ ಪಂದ್ಯ

ಗಯಾನ, ಆಗಸ್ಟ್ 08, 2019 (www.justkannada.in): ಟಿ20 ಸರಣಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕ್ಲೀನ್ ಸ್ವೀಪ್ ಸಾಧಿಸಿರುವ ಭಾರತ ತಂಡ ಈಗ ಏಕದಿನ ಸರಣಿಗೆ ಸಜ್ಜಾಗಿದೆ.

ಗಯಾನದ ಪ್ರಾವಿಡೆನ್ಸ್ ಸ್ಟೇಡಿಯಂನ ಮೈದಾನದಲ್ಲಿ ಇಂದು ಭಾರತ-ವೆಸ್ಟ್ ಇಂಡೀಸ್ ನಡುವೆ ಮೊದಲ ಏಕದಿನ ಪಂದ್ಯ ನಡೆಯಲಿದೆ.

ವಿಶ್ವಕಪ್ ಟೂರ್ನಿಯಿಂದ ಹೊರಗುಳಿದಿದ್ದ ಶಿಖರ್ ಧವನ್ ವಿಂಡೀಸ್ ಪ್ರವಾಸಕ್ಕೆ ಮರಳಿರುವುದರಿಂದ ರೋಹಿತ್ ಶರ್ಮಾ ಜೊತೆಯಾಗಿ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಕೆ.ಎಲ್. ರಾಹುಲ್ ನಾಲ್ಕನೇ ಕ್ರಮಾಂಕ್ಕೆ ಮರಳಿದ್ದಾರೆ.

ಇನ್ನು ವಿಂಡೀಸ್ ತಂಡಕ್ಕೆ ಗೇಲ್ ಪುನರಾಗಮನದಿಂದ ಬಲ ಬಂದಿದೆ. ಎಡಗೈ ಬ್ಯಾಟ್ಸ್ ಮೆನ್ ಜಾನ್ ಕ್ಯಾಂಪ್ ಬೆಲ್, ರೋಸ್ಟನ್ ಚೇಸ್ ಹಾಗೂ ಆಲ್ ರೌಂಡರ್ ಕಿಮೋ ಪೌಲ್ ರನ್ನು ಏಕದಿನ ತಂಡಕ್ಕೆ ಆಯ್ಕೆ ಮಾಡಲಾಗಿದೆ.