Tuesday, November 17, 2026

Dasara Wishes

SIR DasraWishes_JK DasraWishes JK
Happy Dasara
Home Front Page SIR ನೆಪದಲ್ಲಿ ಕುತಂತ್ರ: ಫಾರ್ಮ್ 7 ಬಗ್ಗೆ ಮಾಹಿತಿ ನೀಡಿ- ಸಿಎಂ ಡಿಕೆಶಿ ಸೂಚನೆ

SIR ನೆಪದಲ್ಲಿ ಕುತಂತ್ರ: ಫಾರ್ಮ್ 7 ಬಗ್ಗೆ ಮಾಹಿತಿ ನೀಡಿ- ಸಿಎಂ ಡಿಕೆಶಿ ಸೂಚನೆ

ಮೈಸೂರು ದಸರಾದಲ್ಲಿ ಹೊಸ ಕಾರ್ಯಕ್ರಮ: ಮೂರು ಸೇನೆ ಯೋಧರಿಂದ ಪಥಸಂಚಲನ- ಸಿಎಂ ಡಿಕೆ ಶಿವಕುಮಾರ್‌

ಬೆಂಗಳೂರು,ಅಕ್ಟೋಬರ್‌,1,2026 (www.justkannada.in) ರಾಜ್ಯದಲ್ಲಿ  ಎಸ್‌ ಐಆರ್‌ ನೆಪದಲ್ಲಿ ದಲಿತರು ಹಾಗೂ ಅಲ್ಪಸಂಖ್ಯಾತರ ಮತಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಕುತಂತ್ರ ನಡೆಯುತ್ತಿದೆ. ಎಲ್ಲೆಲ್ಲಿ ಅಕ್ರಮವಾಗಿ ಫಾರ್ಮ್ 7 ಸಲ್ಲಿಕೆ ಮಾಡಲಾಗಿದೆಯೋ ಆ ಎಲ್ಲಾ ವಿವರಗಳನ್ನು ನೀಡುವಂತೆ ಪಕ್ಷದ ಬಿಎಲ್‌ಎ  ಹಾಗೂ ಬಿಎಲ್‌ಓ ಗಳಿಗೆ ಸಿಎಂ ಡಿಕೆ ಶಿವಕುಮಾರ್‌  ಮನವಿ ಮಾಡಿದ್ದಾರೆ.

ಈ ಸಂಬಂಧ  ವಿಡಿಯೋ ಮಾಡಿ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ ನಲ್ಲಿ ಪೋಸ್ಟ್‌ ಮಾಡಿರುವ ಸಿಎಂ ಡಿಕೆ ಶಿವಕುಮಾರ್‌, ಮತದಾನವು ದೇಶದ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕು. ಆದರೆ, ಬಿಜೆಪಿಯವರು ಎಸ್ಐಆರ್ ನೆಪದಲ್ಲಿ ಜನರಿಂದ ಈ ಹಕ್ಕನ್ನು ಕಿತ್ತುಕೊಳ್ಳುತ್ತಿದ್ದಾರೆ. ದೀನ ದಲಿತರು, ಬಡವರು ಹಾಗೂ ಅಲ್ಪಸಂಖ್ಯಾತರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡುವ ಉದ್ದೇಶದಿಂದ ತಪ್ಪು ಮಾಹಿತಿಯೊಂದಿಗೆ ‘ಫಾರ್ಮ್-7’ ಸಲ್ಲಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.ಮೈಸೂರು ದಸರಾದಲ್ಲಿ ಹೊಸ ಕಾರ್ಯಕ್ರಮ: ಮೂರು ಸೇನೆ ಯೋಧರಿಂದ ಪಥಸಂಚಲನ- ಸಿಎಂ ಡಿಕೆ ಶಿವಕುಮಾರ್‌

ಇಂತಹ ಕೃತ್ಯವೆಸಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಈ ರೀತಿ ತಪ್ಪು ಮಾಹಿತಿ ನೀಡಿ ನಾಗರಿಕರನ್ನು ಮತದಾರರ ಪಟ್ಟಿಯಿಂದ ದೂರವಿಡುವವರ ಬಗ್ಗೆ ಬಿಎಲ್ಎಗಳು ನನಗೆ ನಿಖರ ಮಾಹಿತಿ ನೀಡಬೇಕು. ದಯವಿಟ್ಟು ಈ ಮಾಹಿತಿಯನ್ನು dkshivakumarlistens@gmail.com ಗೆ ಕಳುಹಿಸಿ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.‌CM DK Shivakumar jk02_new jk02 new

 

English Summary
Title

DK Shivakumar Demands Probe Into Form 7 Voter Deletion Row in Karnataka

Short Description
Karnataka CM D.K. Shivakumar has demanded a criminal investigation into bulk Form 7 objections filed during the Special Intensive Revision (SIR) of electoral rolls. Following reports of an organized conspiracy to delete genuine voters, Shivakumar instructed the Chief Electoral Officer to provide a constituency-wise account of all objections. Allegations suggest that opposition groups are using mass-submitted forms to target and remove vulnerable communities, including minorities and Dalits, from voter lists. The CM vowed to protect voting rights and penalize fraudulent objectors.
Keywords
SIR, CM DK Shivakumar, instructs, provide, information, Form 7