Sunday, October 11, 2026

Dasara Wishes

ಗೂಗಲ್ ಕಂಪನಿ ಜತೆ VTU ಶೈಕ್ಷಣಿಕ ಒಪ್ಪಂದ: ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಸಹಿ ...
Happy Dasara
Home Cinema ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕ್ರಾಂತಿ’ ಶೀಘ್ರ ಗುಡ್ ನ್ಯೂಸ್ !

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕ್ರಾಂತಿ’ ಶೀಘ್ರ ಗುಡ್ ನ್ಯೂಸ್ !

ಬೆಂಗಳೂರು, ಜೂನ್ 01, 2022 (www.justkannada.in): ನಟ ದರ್ಶನ್ ಅಭಿನಯದ  ‘ಕ್ರಾಂತಿ’ ಸಿನಿಮಾ ಚಿತ್ರೀಕರಣ ಎಲ್ಲಿಗೆ ಬಂದಿದೆ? ಬಿಡುಗಡೆ ಯಾವ ಎಂಬ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಸಿಗುವ ಕಾಲ ಬಂದಿದೆ.

ಹೌದು. ‘ಕ್ರಾಂತಿ’ ಸಿನಿಮಾ ಕುರಿತ ಹೊಸ ಸುದ್ದಿ ಜೂನ್ ಅಂತ್ಯಕ್ಕೆ ಸಿಗುವ ಸಾಧ್ಯತೆಯಿದೆ.  ಚಿತ್ರದ ಮಾತಿನ ಭಾಗದ ಬಹುತೇಕ ಚಿತ್ರೀಕರಣ ಪೂರ್ತಿಯಾಗಿದ್ದು, 3-4 ಹಾಡುಗಳ ಚಿತ್ರೀಕರಣ ಬಾಕಿಯಿದೆ ಎಂದು ಮೂಲಗಳು ತಿಳಿಸಿವೆ.

ಹೈದರಾಬಾದ್, ಬೆಂಗಳೂರು ಮತ್ತು ಮೈಸೂರಿನ ವಿವಿಧ ಭಾಗಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಹೀಗಾಗಿ ಚಿತ್ರತಂಡ ಈ ತಿಂಗಳ ಅಂತ್ಯಕ್ಕೆ ಚಿತ್ರದ ಕುರಿತ ಮಾಹಿತಿ ಹಂಚಿಕೊಳ‍್ಳಬಹುದು ಎನ್ನಲಾಗಿದೆ.

ಅಂದಹಾಗೆ ಚಿತ್ರದಲ್ಲಿ ದರ್ಶನ್ ಗೆ ನಾಯಕಿಯಾಗಿ ರಚಿತಾ ರಾಮ್ ನಟಿಸಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್, ಸುಮಲತಾ ಅಂಬರೀಶ್ ಸೇರಿದಂತೆ ಖ್ಯಾತನಾಮರು ನಟಿಸಿದ್ದಾರೆ.