ಜೂನ್ 3ರಿಂದ ಹೆಚ್ಚುವರಿ ಶುಲ್ಕವಿಲ್ಲದೇ ಅಮೆಜಾನ್ ಪ್ರೈಮ್’ನಲ್ಲಿ ನೋಡಿ ಕೆಜಿಎಫ್ 2

ಬೆಂಗಳೂರು, ಜೂನ್ 01, 2022 (www.justkannada.in): ಅಭಿಮಾನಿಗಳು ತಮ್ಮ ಮನೆಯಲ್ಲಿಯೇ ಕುಳಿತು ಕುಟುಂಬ ಸಮೇತವಾಗಿ ಕೆಜಿಎಫ್ 2 ಚಿತ್ರವನ್ನು ವೀಕ್ಷಿಸಬಹುದಾಗಿದೆ.

ಹೌದು. ಜೂನ್ 3 ರಂದು ಅಮೆಜಾನ್ ಪ್ರೈಮ್ ವೀಡಿಯೊ ಗ್ರಾಹಕರು ನೋಡಬಹುದಾಗಿದೆ.  ಚಿತ್ರವು ಇನ್ನು ಕೆಲವೇ ದಿನಗಳಲ್ಲಿ 50 ದಿನಗಳನ್ನು ಪೂರೈಸಲಿದ್ದು, ಇದೇ ಸಂದರ್ಭದಲ್ಲಿ ಚಿತ್ರತಂಡದಿಂದ ಗುಡ್ ನ್ಯೂಸ್ ಸಿಕ್ಕಿದೆ.

ಚಿತ್ರವನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಅಮೆಜಾನ್ ‍ಪ್ರೈಂನಲ್ಲಿ ನೋಡಬಹುದಾಗಿದೆ. ಚಿತ್ರವು ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿತ್ತು.

ಭಾರತದಲ್ಲಿನ ಪ್ರಮುಖ ಚಂದಾದಾರರು ಮತ್ತು ಪ್ರಪಂಚದಾದ್ಯಂತ 200 ಕ್ಕೂ ಹೆಚ್ಚು ದೇಶಗಳ ಜನರು ತಮ್ಮ ಮನೆಯಿಂದಲೇ ಈ ಬ್ಲಾಕ್ ಬಸ್ಟರ್ ಚಿತ್ರವನ್ನು ನೋಡಬಹುದಾಗಿದೆ.

ಪ್ರಶಾಂತ್ ನೀಲ್ ಅವರ ನಿರ್ದೇಶನದ ಈ ಚಿತ್ರದಲ್ಲಿ ಯಶ್, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರಾಜ್, ರಾವ್ ರಮೇಶ್ ನಟಿಸಿರುವ ಚಿತ್ರದ ಭಾರತ ಯಶಸ್ವಿ ಚಿತ್ರಗಳಲ್ಲಿ ಒಂದು ಎಂಬ ಖ್ಯಾತಿಗೆ ಪಾತ್ರವಾಗಿದೆ.