Saturday, September 26, 2026

BDA Apartments

ಬಿಬಿಎಂಪಿ ಚುನಾವಣೆಗೆ ನಾವು ಸರ್ವ ಸನ್ನದ್ಧ- ಸಿಎಂ ಬಸವರಾಜ ಬೊಮ್ಮಾಯಿ BDA JK_Adv BDA Adv
Home Front Page ಬಿಬಿಎಂಪಿ ಚುನಾವಣೆಗೆ ನಾವು ಸರ್ವ ಸನ್ನದ್ಧ- ಸಿಎಂ ಬಸವರಾಜ ಬೊಮ್ಮಾಯಿ.

ಬಿಬಿಎಂಪಿ ಚುನಾವಣೆಗೆ ನಾವು ಸರ್ವ ಸನ್ನದ್ಧ- ಸಿಎಂ ಬಸವರಾಜ ಬೊಮ್ಮಾಯಿ.

ಬೆಂಗಳೂರು,ಮೇ,20,2022(www.justkannada.in): ಎಂಟು ವಾರಗಳಲ್ಲಿ ಬಿಬಿಎಂಪಿ ಚುನಾವಣೆ ನಡೆಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ನಿರ್ದೆಶನ ನೀಡಿರುವ ಹಿನ್ನೆಲೆಯಲ್ಲಿ ಈ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.

ಬಿಬಿಎಂಪಿ ಚುನಾವಣೆ ನಡೆಸಲು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.  ಸುಪ್ರೀಂ ಆದೇಶವನ್ನ ಸ್ವಾಗತಸುತ್ತೇವೆ. ಬಿಬಿಎಂಪಿ ಚುನಾವಣೆಗೆ ನಾವು ಸರ್ವ ಸನ್ನದ್ಧರಾಗಿದ್ದೇವೆ.  ಬಿಬಿಎಂಪಿ ಚುನಾವಣೆ ನಡೆಸಲು ಸಿದ್ಧರಿದ್ದೇವೆ. ಮೀಸಲಾತಿ ಪರಿಶೀಲನೆಗೆ ಸುಪ್ರೀಂಕೋರ್ಟ್ ಸಹಮತ ನೀಡಿದ್ದು,  ನಾವು ಸಹ  ತಜ್ಞರ ಸಮಿತಿ ರಚನೆ ಮಾಡುತ್ತೇವೆ. ಒಬಿಸಿಗೆ ಮೀಸಲಾತಿ ಕೊಡಬೇಕೆಂದು ನಮ್ಮ ಆಶಯ. ಸುಪ್ರೀಂಕೋರ್ಟ್ ಆದೇಶದಿಂದ ಸಮಾಧಾನವಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

Key words: ready – BBMP –election-CM-Basavaraja Bommai