Saturday, October 17, 2026

Dasara Wishes

CIMS ಡೀನ್‌ ಡಾ. ಮಂಜುನಾಥ್‌ ದಬ್ಬಾಳಿಕೆ : ಸಿಡಿದ ವೈದ್ಯ ವಿದ್ಯಾರ್ಥಿಗಳಿಂದ ಪ್ರತ...
Happy Dasara
Home Front Page ದೆಹಲಿ ಪ್ರವಾಸ ಅರ್ಧಕ್ಕೆ ಮೊಟಕು: ಬೆಂಗಳೂರಿನತ್ತ ಸಿಎಂ ಬಿಎಸ್ ಯಡಿಯೂರಪ್ಪ ತುರ್ತಾಗಿ ಪ್ರಯಾಣ…

ದೆಹಲಿ ಪ್ರವಾಸ ಅರ್ಧಕ್ಕೆ ಮೊಟಕು: ಬೆಂಗಳೂರಿನತ್ತ ಸಿಎಂ ಬಿಎಸ್ ಯಡಿಯೂರಪ್ಪ ತುರ್ತಾಗಿ ಪ್ರಯಾಣ…

ಬೆಂಗಳೂರು,ಆ,7,2019(www.justkannada.in):  ರಾಜ್ಯದಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆ ಸಿಎಂ ಬಿಎಸ್ ಯಡಿಯೂರಪ್ಪ ದೆಹಲಿ ಪ್ರವಾಸವನ್ನ ಅರ್ಧಕ್ಕೆ ಮೊಟಕುಗೊಳಿಸಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ.

ಹೈಕಮಾಂಡ್ ಸೂಚನೆ ಮೇರೆಗೆ ಸಿಎಂ ಬಿಎಸ್ ಯಡಿಯೂರಪ್ಪ ಬೆಂಗಳೂರಿಗೆ ತುರ್ತಾಗಿ ಪ್ರಯಾಣ ಬೆಳೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ರಾಜ್ಯದಲ್ಲಿ ಉಂಟಾಗಿರುವ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವಂತೆ ಹೈಕಮಾಂಡ್ ಸಿಎಂ ಬಿಎಸ್ ವೈಗೆ ಸೂಚನೆ ನೀಡಿದೆ. ಹಾಗಯೇ ಎರಡು ದಿನಗಳ ನಂತರ ದೆಹಲಿಗೆ ಆಗಮಿಸುವಂತೆ ಹೈಕಮಾಂಡ್ ಸೂಚಿಸಿದೆ ಎನ್ನಲಾಗಿದೆ.

ಹೀಗಾಗಿ ಹೈಕಮಾಂಡ್ ಸೂಚನೆ ಮೇರೆಗೆ ಸಿಎಂ ಬಿಎಸ್ ವೈ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಕೆಲ ಕೇಂದ್ರ ಸಚಿವರ ಭೇಟಿ ಮೊಟಕುಗೊಂಡಿದ್ದು ಮತ್ತೆ ಸಚಿವ ಸಂಪುಟ ರಚನೆ ಮುಂದಕ್ಕೆ ಹೋಗಿದೆ.

 

Key words: Karnataka –flood-New Delhi- tour – CM BS Yeddyurappa-Travel – Bangalore