Wednesday, August 19, 2026

BDA Apartments

Home Cinema ‘ಸಾಹೋ’ ಬಳಿಕ ದಾಂಪತ್ಯ ಜೀವನಕ್ಕೆ ಕಾಲಿಡಲು ಪ್ರಭಾಸ್ ರೆಡಿ !

‘ಸಾಹೋ’ ಬಳಿಕ ದಾಂಪತ್ಯ ಜೀವನಕ್ಕೆ ಕಾಲಿಡಲು ಪ್ರಭಾಸ್ ರೆಡಿ !

ನವದೆಹಲಿ, ಆಗಸ್ಟ್ 07, 2019 (www.justkannada.in): ‘ಸಾಹೋ’ ಸಿನಿಮಾ ಬಿಡುಗಡೆಯಾದ ಬಳಿಕ ನಟ ಪ್ರಭಾಸ್‌ ಅಮೆರಿಕ ಮೂಲದ ಉದ್ಯಮಿ ಪುತ್ರಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

‘ಬಾಹುಬಲಿ’ ಚಿತ್ರದ ಯಶಸ್ಸಿನ ನಂತರ ಪ್ರಭಾಸ್‌, ಟಾಲಿವುಡ್‌ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎಂದೇ ಕರೆಸಿಕೊಂಡಿದ್ದಾರೆ. ಪ್ರಭಾಸ್‌ ಮದುವೆ ಕುರಿತಾದ ಹಲವಾರು ಗಾಳಿಸುದ್ದಿಗಳು ಆಗಾಗ ಕೇಳಿಬರುತ್ತಿದ್ದವು.

ಇದೀಗ ಅವರ ಕುಟುಂಬ ಸದಸ್ಯರು ಪ್ರಭಾಸ್‌ಗೆ ಅಮೆರಿಕ ಮೂಲದ ಉದ್ಯಮಿ ಮಗಳನ್ನು ಮದುವೆಗೆ ಗೊತ್ತು ಮಾಡಿದ್ದಾರೆ. ‘ಸಾಹೋ’ ಬಿಡುಗಡೆಯ ಬೆನ್ನಲ್ಲೇ ಮದುವೆ ಮಾತುಕತೆಗಳು ಅಂತಿಮಗೊಳ್ಳಲಿವೆ ಎಂದು ಮೂಲಗಳು ತಿಳಿಸಿವೆ.