Wednesday, August 19, 2026

BDA Apartments

Home Front Page ಭಾರಿ ಮಳೆ ಗಾಳಿಗೆ ಹಾರಿಹೋದ ಮನೆಯ ಮೇಲ್ಚಾವಣಿ: ಅಪಾಯದಿಂದ ಪಾರು.

ಭಾರಿ ಮಳೆ ಗಾಳಿಗೆ ಹಾರಿಹೋದ ಮನೆಯ ಮೇಲ್ಚಾವಣಿ: ಅಪಾಯದಿಂದ ಪಾರು.

ಮೈಸೂರು,ಏಪ್ರಿಲ್ 2,2022(www.justkannada.in): ಕಳೆದ ರಾತ್ರಿ ಬಿದ್ದ  ಭಾರಿ ಮಳೆ ಗಾಳಿಗೆ ಮನೆಯ ಮೇಲ್ಚಾವಣಿ ಹಾರಿಹೋದ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲ್ಲೂಕಿನಲ್ಲಿ ನಡೆದಿದೆ.

ಎಚ್.ಡಿ.ಕೋಟೆ ತಾಲೋಕಿನ ಕೇರಳ ಗಡಿಭಾಗದ ಡಿ.ಬಿ.ಕುಪ್ಪೆಯಲ್ಲಿ ಘಟನೆ ನಡೆದಿದೆ.  ಸಮೀರ್ ಅಲಿ ಎಂಬುವವರಿಗೆ ಸೇರಿದ ಮನೆಯ ಮೇಲ್ಚಾವಣಿ ಮಳೆ ಗಾಳಿಗೆ ಹಾರಿ ಹೋಗಿದೆ.  ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ.

ಸಂಪೂರ್ಣ ಮನೆಯ ಶೀಟ್ ಚಾವಣಿಯೇ ಹಾರಿ ಹೋದರೂ ಮನೆ ಮಂದಿಗೆ ಅಚ್ವರಿಯ ಮಾದರಿ‌ ಯಾವುದೇ ಅವಗಡ ಸಂಭವಿಸಿಲ್ಲ. ಘಟನಾ‌ಸ್ಥಳಕ್ಕೆ ಕಂದಾಯ ಇಲಾಖೆ ಮತ್ತು ಗ್ರಾಮ‌‌ ಪಂಚಾಯ್ತಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Key words: roof – house –rain-HD Kote