Friday, August 21, 2026

BDA Apartments

Home Front Page ಶಾಲೆಯ ಪಠ್ಯದಲ್ಲಿ ಸಿದ್ಧಗಂಗಾ ಶ್ರೀಗಳ ಜೀವನಚರಿತ್ರೆ ಅಳವಡಿಸಲು ಮಾಜಿ ಸಿಎಂ ಬಿಎಸ್ ವೈ ಮನವಿ.

ಶಾಲೆಯ ಪಠ್ಯದಲ್ಲಿ ಸಿದ್ಧಗಂಗಾ ಶ್ರೀಗಳ ಜೀವನಚರಿತ್ರೆ ಅಳವಡಿಸಲು ಮಾಜಿ ಸಿಎಂ ಬಿಎಸ್ ವೈ ಮನವಿ.

ತುಮಕೂರು,ಏಪ್ರಿಲ್,1,2022(www.justkannada.in): ಕಾಯಕ ಯೋಗಿ ಲಿಂ. ಡಾ.ಶಿವಕುಮಾರ ಶ್ರೀಗಳ ಜೀವನಚರಿತ್ರೆಯನ್ನ ಶಾಲಾ ಪಠ್ಯದಲ್ಲಿ ಅಳವಡಿಸುವಂತೆ ಸರ್ಕಾರಕ್ಕೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮನವಿ ಮಾಡಿದರು.

ಡಾ.ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತ್ಯುತ್ಸವ ಅಂಗವಾಗಿ ಸಿದ್ಧಗಂಗಾ ಮಠದಲ್ಲಿ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಶಿಕ್ಷಣ ಕ್ಷೇತ್ರಕ್ಕೆ ಡಾ.ಶಿವಕುಮಾರ  ಸ್ವಾಮೀಜಿಗಳ ಕೊಡುಗೆ ಅಪಾರ.  ಮುಂದಿನ ಪೀಳಿಗೆಗೆ ಪೂಜ್ಯರ ನಡೆ-ನುಡಿಯನ್ನ ಪರಿಚಯಿಸಲು ಶಾಲಾ ಪಠ್ಯದಲ್ಲಿ ಅವರ ಜೀವನ ಚರಿತ್ರೆಯನ್ನು ಅಳವಡಿಸಬೇಕು ಎಂದರು.

ಇನ್ನು ಈಗಾಗಲೇ ಸರ್ಕಾರದ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಡಾ.ಶಿವಕುಮಾರ ಶ್ರೀಗಳ ಹೆಸರನ್ನಿಡಲು ವೇದಿಕೆಯಲ್ಲೇ ಸಿಎಂ ಬೊಮ್ಮಾಯಿ ಘೋಷಿಸಿದ್ದಾರೆ. ಹಾಗೆಯೇ ಏಪ್ರಿಲ್ 1 ಅನ್ನು ದಾಸೋಹ ದಿನವಾಗಿ ಆಚರಣೆ ಮಾಡುವುದಾಗಿ ತಿಳಿಸಿದ್ದಾರೆ.

Key words: Former CM- BS Yeddyurappa- appeals -Siddaganga Sri – school text