ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ: ಸರ್ಕಾರದ ವಿರುದ್ಧ ಡಿ.ಕೆ ಶಿವಕುಮಾರ್ ವಾಗ್ದಾಳಿ.

ಬೆಂಗಳೂರು,ಮಾರ್ಚ್,31,2022(www.justkannada.in): ದೇಶದಲ್ಲಿ ಅಗತ್ಯ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಇಂದು ಕೆಪಿಸಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ‍್ಧ ಆಕ್ರೋಶ ವ್ಯಕ್ತಪಡಿಸಿತು.

ಬೆಲೆ ಏರಿಕೆ ವಿರೋಧಿಸಿ ಕೆಪಿಸಿಸಿ ಕಚೇರಿ ಎದುರು. ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೆವಾಲಾ, ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್, ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರತಿಭಟನೆ  ನಡೆಯಿತು. ಸಿಲಿಂಡರ್ ಮತ್ತು ವಾಹನಗಳಿಗೆ ಹಾರ ಹಾಕಿ ಧರಣಿ ನಡೆಸಿದರು.

ಈ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ  ಡಿ.ಕೆ ಶಿವಕುಮಾರ್, ಸರ್ಕಾರ ಜನರ ಪಿಕ್  ಪಾಕೆಟ್ ಮಾಡುತ್ತಿದೆ ಜನರ ಜೇಬು ಸುಲಿಗೆ ಮಾಡುತ್ತಿದೆ. ಪಂಚರಾಜ್ಯ ಚುನಾವಣೆಗೂ ಮುನ್ನ ತೈಲಬೆಲೆ ಇಳಿಕೆ ಮಾಡಿದ್ದರು.  ಈಗ ಮತ್ತೆ ತೈಲಬೆಲೆ ಏರಿಕೆ ಮಾಡಿದ್ರು  ಮನುಷ್ಯ ಯಾವ ಏಟು ಬೇಕಾದ್ರೂ ಸಹಿಸುತ್ತಾನೆ. ಆದರೆ ಆರ್ಥಿಕ ಪೆಟ್ಟು ಸಹಿಸಲ್ಲ ನಿತ್ಯ ಬೆಲೆ ಏರಿಕೆಯಿಂದ ಜನ ಸಾಯಯುತ್ತಿದ್ದಾರೆ ಇದು ದಪ್ಪ ಚರ್ಮದ ಸರ್ಕಾರಕ್ಕೆ ಕಾಣುತ್ತಿಲ್ಲ. ಬೆಲೆ ಏರಿಕೆ ಮುಕ್ತ ಭಾರತ ಆಗಬೇಕು ಎಂದು ಆಗ್ರಹಿಸಿದರು.

Key words: Congress-protests -over -price hike- DK Shivakumar