Wednesday, August 26, 2026

BDA Apartments

Home Front Page ಪರೀಕ್ಷೆಗೆ ಗೈರಾಗಿ ಭವಿಷ್ಯ ಹಾಳುಮಾಡಿಕೊಳ್ಳಬೇಡಿ- ವಿದ್ಯಾರ್ಥಿಗಳಲ್ಲಿ ಸಚಿವ ಸುಧಾಕರ್ ಮನವಿ

ಪರೀಕ್ಷೆಗೆ ಗೈರಾಗಿ ಭವಿಷ್ಯ ಹಾಳುಮಾಡಿಕೊಳ್ಳಬೇಡಿ- ವಿದ್ಯಾರ್ಥಿಗಳಲ್ಲಿ ಸಚಿವ ಸುಧಾಕರ್ ಮನವಿ

ಚಿಕ್ಕಬಳ್ಳಾಪುರ,ಮಾರ್ಚ್,27,2022(www.justkannada.in): ನಾಳೆಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಆರಂಭವಾಗಲಿದ್ದು ಹಿಜಾಬ್ ವಿವಾದ ಹಿನ್ನೆಲೆಯಲ್ಲಿ  ಪರೀಕ್ಷೆಗೆ ಗೈರಾಗಿ ಭವಿಷ್ಯ ಹಾಳುಮಾಡಿಕೊಳ್ಳಬೇಡಿ ಎಂದು ವಿದ್ಯಾರ್ಥಿಗಳಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದ್ದಾರೆ.

ಮಾಧ್ಯಮಗಳ ಜತೆ ಇಂದು ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ಸರ್ಕಾರದ ಆದೇಶವನ್ನ ಗೌರವಿಸಿ ಸಮವಸ್ತ್ರ ದರಸಿ ಪರೀಕ್ಷೆ ಬರೆಯಿರಿ  ಮಕ್ಕಳು ಸಮವಸ್ತ್ರ ಧರಿಸಿ ಪರೀಕ್ಷೆಗೆ ಹಾಜರಾಗಿ.  ಪ್ರಚೋದನೆಗೆ ಒಳಗಾಗಿ ಪರೀಕ್ಷೆಗೆ  ಗೈರು ಹಾಜರಾಗಬೇಡಿ  ನಿಮ್ಮ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ. ಕಾನೂನಿಗೆ ಬೆಲೆಕೊಟ್ಟು ಸಮವಸ್ತ್ರ ಧರಿಸಿ ಬನ್ನಿ  ಎಂದು ಕಿವಿಮಾತು ಹೇಳಿದರು.

Key words: sslc-exam-Minister-Sudhakar – students