Friday, August 7, 2026

BDA Apartments

Home Cinema ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಹೊಸ ಮೈಲಿಗಲ್ಲು ಬರೆದ ಜೇಮ್ಸ್!

ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಹೊಸ ಮೈಲಿಗಲ್ಲು ಬರೆದ ಜೇಮ್ಸ್!

ಬೆಂಗಳೂರು, ಮಾರ್ಚ್ 21, 2022 (www.justkannada.in): ಕೇವಲ ಮೂರೇ ದಿನದಲ್ಲಿ 100 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಜೇಮ್ಸ್ ಚಿತ್ರ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

ಕರ್ನಾಟಕ ಮಾತ್ರವಲ್ಲದೆ ದೇಶ-ವಿದೇಶಗಳಲ್ಲೂ ಜೇಮ್ಸ್ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಗುತ್ತಿದೆ. 3 ದಿನಕ್ಕೆ ವರ್ಲ್ಡ್ ವೈಡ್ ಕಲೆಕ್ಷನ್ 100 ಕೋಟಿ ದಾಟಿದೆ.

ಕರ್ನಾಟಕದಲ್ಲೇ 386 ಸಿಂಗಲ್ ಸ್ಕ್ರೀನ್, 180 ಮಲ್ಟಿಪ್ಲೆಕ್ಸ್‌ಗಳಲ್ಲಿ ಜೇಮ್ಸ್ ಪ್ರದರ್ಶನ ಕಾಣುತ್ತಿದೆ. UAEಯಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾವೊಂದು ಪ್ರಾಬಲ್ಯ ಸಾಧಿಸಿದ್ದರೆ, ಕೆನಡಾ, ಜರ್ಮನಿಯಲ್ಲೂ ಜೇಮ್ಸ್ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ.

32 ಕೋಟಿ‌ ಕಲೆಕ್ಷನ್ ‌ಮಾಡಿದ್ದ ಸಿನಿಮಾ ಶುಕ್ರವಾರ, ಶನಿವಾರ 20‌ಕೋಟಿಗೂ ಹೆಚ್ಚು ಗಳಿಕೆ ಮಾಡಿತ್ತು. ಭಾನುವಾರದ ರಜಾ ದಿನವಾಗಿದ್ದ‌ ಮೊದಲ ದಿನದ ರೀತಿಯಲ್ಲೇ ಭರ್ಜರಿ ಕಲೆಕ್ಷನ್ ‌ಮಾಡಿದೆ.