Tuesday, September 29, 2026

BDA Apartments

ಮಂಡ್ಯಕ್ಕೆ ಹೊಸದಾಗಿ ಯಾವ ಅನುದಾನ ತಂದಿದ್ದೀರಿ..?- ಸಂಸದೆ ಸುಮಲತಾ ಅಂಬರೀಶ್ ವಿ...
Home Front Page ಮಂಡ್ಯಕ್ಕೆ ಹೊಸದಾಗಿ ಯಾವ ಅನುದಾನ ತಂದಿದ್ದೀರಿ..?- ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ಜೆಡಿಎಸ್ ಶಾಸಕ ಕಿಡಿ.

ಮಂಡ್ಯಕ್ಕೆ ಹೊಸದಾಗಿ ಯಾವ ಅನುದಾನ ತಂದಿದ್ದೀರಿ..?- ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ಜೆಡಿಎಸ್ ಶಾಸಕ ಕಿಡಿ.

 

ಮಂಡ್ಯ,ಮಾರ್ಚ್,21,2022(www.justkannada.in): ಶಾಸಕರ ಕೆಲಸವನ್ನ ನಾನೇ ಮಾಡುತ್ತೇನೆ ಎಂದು  ಹೇಳಿಕೆ ನೀಡಿದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ತಿರುಗೇಟು ನೀಡಿದ್ದಾರೆ.

ಶ್ರೀರಂಗಪಟ್ಟಣದಲ್ಲಿಂದು ಮಾತನಾಡಿದ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ, ಸಂಸದರಾಗಿ ಏನು ಮಾಡಬೇಕೆಂಬ ಜವಾಬ್ದಾರಿಯ ಅರಿವಿಲ್ಲ. ಮಂಡ್ಯಕ್ಕೆ  ಹೊಸದಾಗಿ ಯಾವ ಅನುದಾನ ತಂದಿದ್ದೀರಿ.  ಮಂಡ್ಯಕ್ಕೆ ನಾನು ಅನುದಾನ ತಂದಿದ್ದೇನೆ. ಬೇಕಿದ್ದರೆ ಲೆಕ್ಕ ಕೊಡುತ್ತೇನೆ ಎಂದು ಟಾಂಗ್ ನೀಡಿದರು.

ರೈಲ್ವೆ ಯೋಜನೆಗೆ ದಕ್ಷಿಣ ಭಾರತಕ್ಕೆ  55 ಕೋಟಿ ಬಿಡುಗಡೆ, ಉತ್ತರ ಭಾರತಕ್ಕೆ 13 ಸಾವಿರ  ಕೋಟಿ ಬಿಡುಗಡೆಯಾಗಿದೆ ಸಂಸದೆಯಾಗಿ ಸುಮಲತಾ ಏನು ಮಾಡಿದ್ದಾರೆ.  ಸಂಸದೆ ಸುಮಲಾತಾ ಭ್ರಮಲೋಕದಲ್ಲಿರುವಂತೆ ಕಾಣುತ್ತಿದೆ ಎಂದು ರವೀಂದ್ರ ಶ್ರೀಕಂಠಯ್ಯ ಕಿಡಿಕಾರಿದ್ದಾರೆ.

Key words: Mandya-Sumalatha Ambarish-JDS – MLA