20 ದಿನಗಳ ಬಳಿಕ ಸ್ವಗ್ರಾಮಕ್ಕೆ ಮೃತ ನವೀನ್ ಪಾರ್ಥೀವ ಶರೀರ: ಅಂತಿಮ ದರ್ಶನಕ್ಕೆ ವ್ಯವಸ್ಥೆ.

ಹಾವೇರಿ,ಮಾರ್ಚ್,21,2022(www.justkannada.in): ಉಕ್ರೇನ್ ​ನಲ್ಲಿ ರಷ್ಯಾ ದಾಳಿ ವೇಳೆ ಮೃತಪಟ್ಟ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕು ಚಳಗೇರಿ ಗ್ರಾಮದ ವಿದ್ಯಾರ್ಥಿ ನವೀನ್ ಶೇಖರಪ್ಪ ಗ್ಯಾನಗೌಡರ್ ಅವರ ಪಾರ್ಥಿವ ಶರೀರವನ್ನ ಸ್ವಗ್ರಾಮಕ್ಕೆ ತರಲಾಗಿದೆ.

ಮೃತಪಟ್ಟ 20 ದಿನಗಳ ಬಳಿಕ ಚಳಗೇರಿ ಗ್ರಾಮಕ್ಕೆ ನವೀನ್ ಪಾರ್ಥೀವ ಶರೀರ ತರಲಾಗಿದ್ದು  ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನವೀನ್ ಅಂತಿಮ ದರ್ಶನ ಪಡೆಯಲು ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ಹಾವೇರಿಯತ್ತ ಹೊರಟಿದ್ದಾರೆ. ಗಣ್ಯರು ಭೇಟಿ ನೀಡುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಸುಮಾರು 300 ಪೊಲೀಸ್ ಸಿಬ್ಬಂದಿಯನ್ನು ಬಂದೋಬಸ್ತ್​ಗೆ ನಿಯೋಜಿಸಲಾಗಿದೆ.navee

ನವೀನ್ ಮೃತದೇಹಕ್ಕೆ  ಕುಟುಂಬಸ್ಥರಿಂದ ಅಂತಿಮ ವಿಧಿವಿಧಾನ ಮುಕ್ತಾಯ ಅಂತಿಮದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಂಜೆ 4 ಗಂಟೆ ವೇಳೆಗೆ ನವೀನ್ ಪಾರ್ಥೀವಶರೀರದ ಮೆರವಣಿಗೆ ನಡೆಯಲಿದ್ದು ಮೆರವಣಿಗೆಯಲ್ಲಿ ಶಾಸಕ ಅರುಣ್ ಕುಮಾರ್ ಸಂಸದ ಶಿವಕುಮಾರ್ ಉದಾಸಿ ಭಾಗಿಯಾಗಲಿದ್ದಾರೆ. ನಂತರ ಮೆಡಿಕಲ್ ಕಾಲೇಜಿಗೆ ದೇಹದಾನ ಮಾಡಲು ನಿರ್ಧರಿಸಲಾಗಿದೆ.

Key words: ukrain-naveen-deadbody-Haveri