Sunday, August 23, 2026

BDA Apartments

Home Front Page ಮುಸ್ಲಿಮರ ಬಡ ಮಕ್ಕಳ ಮೇಲೆ ಕೆಲ ಸಂಘಟನೆಗಳಿಂದ ಒತ್ತಡ ಸರಿಯಲ್ಲ- ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ.

ಮುಸ್ಲಿಮರ ಬಡ ಮಕ್ಕಳ ಮೇಲೆ ಕೆಲ ಸಂಘಟನೆಗಳಿಂದ ಒತ್ತಡ ಸರಿಯಲ್ಲ- ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ.

ಬೆಂಗಳೂರು,ಮಾರ್ಚ್,15,2022(www.justkannada.in):  ಮುಸ್ಲೀಮರಲ್ಲಿ ಬಹಳ ಮಂದಿ ಬಡವರಿದ್ದಾರೆ. ಬಡ ಮಕ್ಕಳ ಮೇಲೆ ಕೆಲ ಸಂಘಟನೆಗಳು ಒತ್ತಡ ಹೇರಿವೆ. ಇದು ಸರಿಯಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಮಾಧ್ಯಮಗಳ ಜತೆ ಇಂದು ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಹಿಜಾಬ್ ಕುರಿತು ಹೈಕೋರ್ಟ್ ಇಂದು ತೀರ್ಪು ನೀಡಿದ್ದು ಇವತ್ತಿನ ತೀರ್ಪನ್ನ ಮುಸ್ಲಿಮರು  ಸ್ವಾಗತಿಸುವ ವಿಶ್ವಾಸವಿದೆ. ಇವತ್ತಿನ ತೀರ್ಪು ಎಲ್ಲರೂ ಸ್ವಾಗತ ಮಾಡಬೇಕು. ಶಾಲೆಗಳು ವಿವಾದ ಗಲಾಟೆ ಹೊರತಾಗಿರಬೇಕು  ಎಂದರು.

ಈ ಕುರಿತು ಹಾಸನದಲ್ಲಿ ಮಾತನಾಡಿರುವ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ, ಹೈಕೋರ್ಟ್ ತೀರ್ಪನ್ನ ಸ್ವಾಗತಿಸುತ್ತೇವೆ.  ಹಿಜಾಬ್ ಹೆಸರಿನಲ್ಲಿ ಕೆಲವರಿಂದ ಶಾಂತಿ ಕದಡೋ ಯತ್ನ ನಡೆದಿದೆ. ಅಂತವರಿಗೆ ಹೈಕೋರ್ಟ್ ತೀರ್ಪು ಚಾಟಿ ಬೀಸುವಂತಿದೆ ತೀರ್ಪು.  ಸುಪ್ರೀಂಕೋರ್ಟ್ ನಲ್ಲೂ ನಮ್ಮ ಪರ ತೀರ್ಪು ಬರುವ ವಿಶ್ವಾಸವಿದೆ ಎಂದರು.

Key words: hijab-high court-shoba karandlaje