Friday, October 9, 2026

BDA Apartments

Increase in COVID cases: DC’s village stay program with held BDA JK_Adv BDA Adv
Home Front Page ಸಚಿವ ಸಂಪುಟ ಪುನಾರಚನೆ: ಮಹತ್ವದ ಹೇಳಿಕೆ ನೀಡಿದ ಬಸವರಾಜ ಬೊಮ್ಮಾಯಿ

ಸಚಿವ ಸಂಪುಟ ಪುನಾರಚನೆ: ಮಹತ್ವದ ಹೇಳಿಕೆ ನೀಡಿದ ಬಸವರಾಜ ಬೊಮ್ಮಾಯಿ

ನವದೆಹಲಿ, ಮಾರ್ಚ್ 13, 2022 (www.justkannada.in):  ರಾಜ್ಯ ಸಚಿವ ಸಂಪುಟ ಪುನಾರಚನೆ ಕುರಿತಂತೆ ಸಿಎಂ ಬಸವರಾಜ ಬೊಮ್ಮಾಯಿ ಮಹತ್ವದ ಹೇಳಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ಪುನಾರಚನೆ ಬಗ್ಗೆ ವರಿಷ್ಠರು ಇನ್ನೂ ಸೂಚನೆ ಕೊಟ್ಟಿಲ್ಲ. ಹೈಕಮಾಂಡ್ ಸೂಚನೆ ಬಳಿಕ ಈ ಕುರಿತು ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ.

ಪಂಚ ರಾಜ್ಯದ ಚುನಾವಣೆ ಬಳಿಕ ಸಚಿವ ಸಂಪುಟ ಪುನಾರಚನೆ ಮಾಡಲಾಗುತ್ತದೆ ಎನ್ನಲಾಗಿತ್ತು. ಇದೀಗ ಸಿಎಂ ಬಸವರಾಜ ಬೊಮ್ಮಾಯಿ ಸಚಿವ ಸಂಪುಟ ಪುನಾರಚನೆ ಕುರಿತಂತೆ ಹೇಳಿರುವುದು ಕುತೂಹಲ ಮೂಡಿಸಿದೆ.

ವರಿಷ್ಠರು ಸೂಚನೆ ಕೊಟ್ಟ ಮೇಲೆ ದೆಹಲಿಗೆ ಹೋಗುತ್ತೇವನೆ. ವರಿಷ್ಠರು ಯಾವಾಗ ಹೇಳುತ್ತಾರೋ ಆಗ ಸಚಿವ ಸಂಪುಟ ಪುನಾರಚನೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಇದರಿಂದ ಸಚಿವ ಸ್ಥಾನದ ಅಕಾಂಕ್ಷಿಗಳು ದಿಲ್ಲಿ ವಿಮಾನ ಏರುವಂತೆಮಾಡಿದೆ.