Tuesday, September 29, 2026

BDA Apartments

ಪ್ರಾಥಮಿಕ, ಪ್ರೌಢ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಿಗೆ ರಾಜ್ಯ ಸರಕಾರದಿಂದ ಗುಡ್...
Home Front Page ಪ್ರಾಥಮಿಕ, ಪ್ರೌಢ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಿಗೆ ರಾಜ್ಯ ಸರಕಾರದಿಂದ ಗುಡ್ ನ್ಯೂಸ್ !

ಪ್ರಾಥಮಿಕ, ಪ್ರೌಢ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಿಗೆ ರಾಜ್ಯ ಸರಕಾರದಿಂದ ಗುಡ್ ನ್ಯೂಸ್ !

ಬೆಂಗಳೂರು, ಮಾರ್ಚ್ 10, 2022 (www.justkannada.in): ರಾಜ್ಯದ ಪ್ರಾಥಮಿಕ, ಪ್ರೌಢ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಿಗೆ ರಾಜ್ಯ ಸರಕಾರ ಸಿಹಿ ಸುದ್ದಿ ನೀಡಿದೆ. ‘ಮುಖ್ಯ ಶಿಕ್ಷಕ, ಉಪ ಪ್ರಾಂಶುಪಾಲರ ಹುದ್ದೆ’ಗೆ ಪ್ರಭಾರದಲ್ಲಿರಿಸಲು ಸರ್ಕಾರ ಅನುಮತಿ ನೀಡಿ ಆದೇಶಿಸಿದೆ.

ಹೌದು. ರಾಜ್ಯದ ಸರ್ಕಾರಿ, ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಮುಖ್ಯ ಶಿಕ್ಷಕರ, ಉಪ ಪ್ರಾಂಶುಪಾಲರ ಹುದ್ದೆಗಳು ಖಾಲಿಯಿದ್ದಲ್ಲಿ, ಆ ಹುದ್ದೆಗಳಿಗೆ ದೈಹಿಕ ಶಿಕ್ಷಣ ಶಿಕ್ಷಕರನ್ನು ಸೇವಾ ಜೇಷ್ಠತಾ ಆಧಾರದ ಮೇಲೆ, ಇನ್ಮುಂದೆ ಪ್ರಭಾರದಲ್ಲಿರಿಸಲು ಸರ್ಕಾರ ಅನುಮತಿಸಿದೆ.

ಈ ಕುರಿತಂತೆ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ, ಸಾರ್ವಜನಿಕ ಶಿಕ್ಷಣ ಆಯುಕ್ತರಿಗೆ ಪತ್ರದಲ್ಲಿ ಸೂಚಿಸಿದ್ದಾರೆ. ಸೇವಾ ಜೇಷ್ಠತಾ ಆಧಾರದ ಮೇಲೆ ದೈಹಿಕ ಶಿಕ್ಷಕರುಗಳನ್ನು, ಕರ್ನಾಟಕ ಸೇವಾ ನಿಯಮಾವಳಿ ನಿಯಮ-1958ರ ನಿಯಮ-68ರನ್ವಯ ಅಧಿಕ ಪ್ರಭಾರದಲ್ಲಿರಿಸಲು ಸರ್ಕಾರ ಅನುಮೋದನೆ ನೀಡಿದೆ ಎಂದು ನಿರ್ದೇಶಿಸಿದ್ದಾರೆ.