Saturday, August 8, 2026

BDA Apartments

Home Front Page ಎತ್ತಿನಹೊಳೆ ಯೋಜನೆ ನೀರು ತಂದರೇ ನಾನು ನೇಣುಗಂಬಕ್ಕೆ ಏರುತ್ತೇನೆ- ಎಂಎಲ್ ಸಿ ಸವಾಲು

ಎತ್ತಿನಹೊಳೆ ಯೋಜನೆ ನೀರು ತಂದರೇ ನಾನು ನೇಣುಗಂಬಕ್ಕೆ ಏರುತ್ತೇನೆ- ಎಂಎಲ್ ಸಿ ಸವಾಲು

ಬೆಂಗಳೂರು,ಮಾರ್ಚ್,7,2022(www.justkannada.in): ಎತ್ತಿನಹೊಳೆ ಯೋಜನೆಯ ನೀರು ತರಲು ಸಾಧ್ಯವಿಲ್ಲ. ಒಂದು ವೇಳೆ ನೀರು ತಂದರೇ ನಾನು ನೇಣುಗಂಬಕ್ಕೆ  ಏರುತ್ತೇನೆ  ಎಂದು ವಿಧಾನ ಪರಿಷತ್ ಜೆಡಿಎಸ್ ಸದಸ್ಯ ಬೋಜೇಗೌಡ ಸವಾಲು ಹಾಕಿದ್ದಾರೆ.

ವಿಧಾನಪರಿಷತ್ ನಲ್ಲಿ ನೀರಾವರಿ ಯೋಜನೆಗಳ ಕುರಿತು ನಡೆದ ಪ್ರಶ್ನೋತ್ತರ ಕಲಾಪದ ವೇಳೆ ಮಾತನಾಡಿದ ಬೋಜೇಗೌಡ, ಎತ್ತಿನಹೊಳೆ ಯೋಜನೆ ಮುಗಿಸಲು ಸಾಧ್ಯವೇ ಇಲ್ಲ. 22 ಕೋಟಿ ಖರ್ಚಾದರೂ ಎತ್ತಿನಹೊಳೆ ಯೋಜನೆ ಮುಗಿಸಲು ಆಗಲ್ಲ. 50 ಸಾವಿರ ಕೋಟಿ ಖರ್ಚು ಮಾಡಿದರೂ ಚಿಕ್ಕಬಳ್ಳಾಪುರಕ್ಕೆ ನೀರು ಕೊಡಲು ಸಾಧ್ಯವಿಲ್ಲ. ಹಾಗೊಂದು ವೇಳೆ ಯೋಜನೆ ಪೂರ್ಣಗೊಂಡರೆ ನಾನು ನೇಣುಹಾಕಿಕೊಳ್ಳುತ್ತೇನೆ ಎಂದರು.

ಎತ್ತಿನಹೊಳೆ ಯೋಜನೆ ಕೆಲವರ ಪಾಲಿಗೆ ಕಾಮಧೇನುವಾಗಿದೆ. ಯಾರ್ಯಾರು ಇದನ್ನು ಕಾಮಧೇನು ಮಾಡಿಕೊಂಡಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅಷ್ಟು ಸುಲಭವಾಗಿ ಎತ್ತಿನಹೊಳೆ ಯೋಜನೆ ಪೂರ್ಣಗೊಳ್ಳಲು ಸಾಧ್ಯವಿಲ್ಲ ಎಂದು ಬೋಜೇಗೌಡ ತಿಳಿಸಿದರು.

Key words: ettinahole plan-session-MLC-Challenge