Monday, August 10, 2026

BDA Apartments

Home Front Page ಸಿದ್ದರಾಮಯ್ಯ ಅವರು ಅಪ್ಪನಾಣೆ ಮತ್ತೆ ಮುಖ್ಯಮಂತ್ರಿ ಆಗಲ್ಲ- ಮಾಜಿ ಸಚಿವ ಸಿ.ಟಿ ರವಿ ವ್ಯಂಗ್ಯ.  

ಸಿದ್ದರಾಮಯ್ಯ ಅವರು ಅಪ್ಪನಾಣೆ ಮತ್ತೆ ಮುಖ್ಯಮಂತ್ರಿ ಆಗಲ್ಲ- ಮಾಜಿ ಸಚಿವ ಸಿ.ಟಿ ರವಿ ವ್ಯಂಗ್ಯ.  

ಬೆಂಗಳೂರು,ಮಾರ್ಚ್,1,2022(www.justkannada.in): ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ ಅವರು ಈ ಹಿಂದೆ ಅಪ್ಪನಾಣೆ ನರೇಂದ್ರ ಮೋದಿ ಪ್ರಧಾನ ಮಂತ್ರಿ ಆಗಲ್ಲ ಎಂದಿದ್ದರು. ಈಗ ನಾನು ಹೇಳ್ತೇನೆ, ಸಿದ್ದರಾಮಯ್ಯ ಅವರು ಅಪ್ಪನಾಣೆ ಮತ್ತೆ ಮುಖ್ಯಮಂತ್ರಿ ಆಗಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವ್ಯಂಗ್ಯವಾಡಿದರು.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಿ.ಟಿ.ರವಿ, ಕಾಂಗ್ರೆಸ್ ಪಕ್ಷದವರು ತಮ್ಮದೇ ಪಕ್ಷದ ಶಾಸಕರ ಮನೆಗೆ ಬೆಂಕಿ ಹಾಕಿ ಅದೇ ಬೆಂಕಿಯಲ್ಲಿ ಚಳಿ ಕಾಯಿಸಿಕೊಂಡವರು. ಬಿಜೆಪಿ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತ ಓನರ್ ಆಗ್ತಾನೆ. ಅದೇ ಜೆಡಿಎಸ್​ನಲ್ಲಿ ದೊಡ್ಡಗೌಡರು ಓನರ್, ಕಾಂಗ್ರೆಸ್​ಗೆ ಸೋನಿಯಾ ಮತ್ತು ರಾಹುಲ್ ಗಾಂಧಿ‌ ಕಾಂಗ್ರೆಸ್​ ಓನರ್ ಎಂದು ಲೇವಡಿ ಮಾಡಿದರು.

ಉಕ್ರೇನ್ -ರಷ್ಯಾ ಯುದ್ಧ  ಕುರಿತು ಪ್ರತಿಕ್ರಿಯಿಸಿದ ಮಾಜಿ ಸಚಿವ ಸಿ.ಟಿ.ರವಿ, ಯುದ್ಧ ನಿಲ್ಲಿಸುವಂತೆ ಭಾರತವನ್ನ ಉಕ್ರೇನ್ ದೇಶ ಕೇಳಿದೆ. ಉಕ್ರೇನ್ ದೇಶ ನಮ್ಮನ್ನ ಕೇಳಿದ್ದು ನಮ್ಮ ಭಾರತದ ಗೌರವವಾಗಿದೆ. ಭಾರತದ ಪಾಸ್​ಪೋರ್ಟ್​ಗೆ ಈಗ ಬೆಲೆ ಇದೆ ಎಂದು ಸಂತಸ ವ್ಯಕ್ತಪಡಿಸಿದರು.

Key words: siddaramaiah- Again-CM-CT Ravi