Friday, August 14, 2026

BDA Apartments

Home Front Page ಕಾಂಗ್ರೆಸ್ 2ನೇ ಹಂತದ ಪಾದಯಾತ್ರೆ ಬಗ್ಗೆ ಟೀಕಿಸಿದ ಸಚಿವ ಕೆ.ಎಸ್ ಈಶ್ವರಪ್ಪ.

ಕಾಂಗ್ರೆಸ್ 2ನೇ ಹಂತದ ಪಾದಯಾತ್ರೆ ಬಗ್ಗೆ ಟೀಕಿಸಿದ ಸಚಿವ ಕೆ.ಎಸ್ ಈಶ್ವರಪ್ಪ.

ಕಲ್ಬರ್ಗಿ,ಫೆಬ್ರವರಿ,27,2022(www.justkannada.in):  ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಇಂದು ಆರಂಭಿಸಿರುವ 2ನೇ ಹಂತದ ಪಾದಯಾತ್ರೆ ಬಗ್ಗೆ ಸಚಿವ ಕೆ.ಎಸ್ ಈಶ್ವರಪ್ಪ ಟೀಕಿಸಿದ್ದಾರೆ.

ಕಲ್ಬುರ್ಗಿಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ಏನು ಮಾಡಬೇಕೆಂದು ತಿಳಿಯದೇ ಪಾದಯಾತ್ರೆ ಮಾಡುತ್ತಿದ್ದಾರೆ.  ಅವರ ಸರ್ಕಾರದಲ್ಲಿ ಮೇಕೆದಾಟು ಯೋಜನೆ ಏಕೆ ಯೋಜನೆ ಜಾರಿ ಮಾಡಲಿಲ್ಲ ಈಗ ಸುಮ್ಮನೇ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುತಿದ್ದಾರೆ ಎಂದು ಕಿಡಿಕಾರಿದರು.

ಹಿಜಾಬ್ ಗಲಾಟೆಯಾಗುವುದಕ್ಕೂ ಕಾಂಗ್ರೆಸ್ ಕಾರಣ ಹಿಂದೂ ಮುಸ್ಲೀಂರು ದೂರವಾಗಬೇಕೆಂದು ಈ ರೀತಿ ರಾಜಕೀಯ ಮಾಡಿದ್ದಾರೆ.  ವೋಟ್ ಬ್ಯಾಂಕ್ ಕುತಂತ್ರ ರಾಜಕೀಯ ಮಾಡುತ್ತಿದ್ದಾರೆ. ಡಿಕೆ ಶಿವಕುಮಾರ್ ಮೊದಲು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ.  ಮೊದಲು ಅವರ ಮೇಲೆ ರಾಷ್ಟ್ರದ್ರೋಹ ಕೇಸ್ ಹಾಕಲಿ. ಈ ಬಗ್ಗೆ ಸಿಎಂ, ಗೃಹ ಸಚಿವರ ಜತೆ ಚರ್ಚೆ ನಡೆಸುತ್ತೇನೆ ಎಂದರು.

Key words: Minister-KS Eshwarappa- criticized-Congress