Sunday, August 2, 2026

BDA Apartments

Home Front Page ಹುಕ್ಕಾ ಬಾರ್ ಗಳ ಮೇಲೆ ಮೈಸೂರು ಮೇಯರ್ ನೇತೃತ್ವದಲ್ಲಿ ದಾಳಿ.

ಹುಕ್ಕಾ ಬಾರ್ ಗಳ ಮೇಲೆ ಮೈಸೂರು ಮೇಯರ್ ನೇತೃತ್ವದಲ್ಲಿ ದಾಳಿ.

ಮೈಸೂರು,ಫೆಬ್ರವರಿ,23,2022(www.justkannada.in): ಅನಧಿಕೃತವಾಗಿ ಹುಕ್ಕಾ ಬಾರ್ ನಡೆಸುತ್ತಿದ್ದ ಆರೋಪ ಹಿನ್ನಲೆ ಮೈಸೂರು ಮಹಾನಗರ ಪಾಲಿಕೆ ಮೇಯರ್ ಸುನಂದಾ ಪಾಲನೇತ್ರ ನೇತೃತ್ವದಲ್ಲಿ ಹುಕ್ಕಾ ಬಾರ್ ಗಳ ಮೇಲೆ  ದಾಳಿ ನಡೆಸಲಾಯಿತು.

ಪಾಲಿಕೆ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ಸದಸ್ಯರು ಈ ದಾಳಿಯಲ್ಲಿ ಭಾಗಿಯಾಗಿದ್ದರು. ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಹುಕ್ಕಾ ಬಾರ್ ನಿಷೇಧದ ಆದೇಶ ಹೊರಡಿಸಲಾಗಿತ್ತು. ಹೀಗಿದ್ದರೂ ಕಾಳಿದಾಸ ರಸ್ತೆ, ಗೋಕುಲಂನ ಹಲವೆಡೆ ಹುಕ್ಕಾ ಬಾರ್ ನಡೆಸುತ್ತಿದ್ದ ಆರೋಪ ಕೇಳಿ ಬಂದಿತ್ತು.

ಹೀಗಾಗಿ ಇಂದು ಮಧ್ಯಾಹ್ನ ಪಾಲಿಕೆ ಸದಸ್ಯರು ದಿಢೀರ್ ದಾಳಿ ನಡೆಸಿದ್ದು, ಹುಕ್ಕಾ ಬಾರ್ ಗಳ ಬಗ್ಗೆ ಕ್ರಮವಹಿಸದ ಅಧಿಕಾರಿಗಳ ವಿರುದ್ಧ ಮೇಯರ್ ಸುನಂದ ಪಾಲನೇತ್ರ ಗರಂ ಆದರು. ಹುಕ್ಕಾಬಾರ್ ನಲ್ಲಿದ್ದ ವಿದ್ಯಾರ್ಥಿಗಳಿಗೆ ಅಧಿಕಾರಿಗಳು ತಿಳಿಹೇಳಿ ಕಳುಹಿಸಿದರು.

Key words: Mysore – attack – hookah -bars.