Sunday, September 13, 2026

BDA Apartments

Home Front Page ಭಜರಂಗದಳ ಕಾರ್ಯಕರ್ತನ ಕೊಲೆ ಪ್ರಕರಣ: ಮೂವರ ಬಂಧನ; 12 ಮಂದಿ ವಶಕ್ಕೆ ಪಡೆದು ವಿಚಾರಣೆ.

ಭಜರಂಗದಳ ಕಾರ್ಯಕರ್ತನ ಕೊಲೆ ಪ್ರಕರಣ: ಮೂವರ ಬಂಧನ; 12 ಮಂದಿ ವಶಕ್ಕೆ ಪಡೆದು ವಿಚಾರಣೆ.

ಬೆಂಗಳೂರು,ಫೆಬ್ರವರಿ,22,2022(www.justkannada.in): ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ ಸಂಬಂಧ ಮೂವರನ್ನ ಬಂಧಿಸಲಾಗಿದ್ದು,  12 ಮಂದಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.

ಬೆಂಗಳೂರಿನಲ್ಲಿ ಈ ಕುರಿತು ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಘಟನೆ ಹಿಂದೆ ಯಾರೇ ಇದ್ದರೂ ಕ್ರಮ ಕೈಗೊಳ್ಳಲಾಗುತ್ತದೆ. ಪ್ರಕರಣದಲ್ಲಿ ಯಾರೇ ಬಾಗಿಯಾಗಿದ್ದರೂ ಕ್ರಮ ವಹಿಸುತ್ತೇವೆ. ಇದರ ಹಿಂದ ಮತೀಯ ಸಂಘಟನೆ ಇದೆಯಾ..? ಹಿಜಾಬ್ ವಿಚಾರಕ್ಕೆ ಘಟನೆ ನಡೆಯುತ್ತಾ..? ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಯಲಿದೆ ಎಂದರು.

ಗೃಹ ಸಚಿವರ ರಾಜೀನಾಮೆಗೆ ಡಿಕೆ ಶಿವಕುಮಾರ್ ಆಗ್ರಹ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅರಗ ಜ್ಞಾನೇಂದ್ರ, ಡಿಕೆಶಿ ಅವರ ಹೇಳಿಕೆಗೆ ಉತ್ತರಿಸಲ್ಲ ಕಾಂಗ್ರೆಸ್ ಟೀಕೆಗಿಂತ ನಮಗೆ ಶಾಂತಿ ಮುಖ್ಯ.ಶಿವಮೊಗ್ಗ ಜನತೆ ಶಾಂತಿ ಕಾಪಾಡಬೇಕು ಎಂದರು.

Key words: home minister-Araga jnanendra-bangalore