Saturday, September 5, 2026

BDA Apartments

Home Cinema ಅಭಿಮಾನಿಗಳ ಕ್ಷಮಾಪಣೆ ಕೇಳಿದ್ದೇಕೆ ಚಾಲೆಂಜಿಂಗ್ ಸ್ಟಾರ್ ?!

ಅಭಿಮಾನಿಗಳ ಕ್ಷಮಾಪಣೆ ಕೇಳಿದ್ದೇಕೆ ಚಾಲೆಂಜಿಂಗ್ ಸ್ಟಾರ್ ?!

ಬೆಂಗಳೂರು, ಫೆಬ್ರವರಿ 19, 2022 (www.justkannada.in): ನಟ ದರ್ಶನ್ ಟ್ವಿಟ್ಟರ್‌ ಮೂಲಕ ತಮ್ಮ ಅಭಿಮಾನಿಗಳ ಕ್ಷಮಾಪಣೆ ಕೇಳಿದ್ದಾರೆ.

ಹೌದು. ನಟ ದರ್ಶನ್ ಕ್ಷಮೆ ಕೇಳಿವುದಕ್ಕೆ ಕಾರಣ ಇಲ್ಲಿದೆ ಓದಿ.

ಎರಡು ದಿನದ ಹಿಂದೆ (ಫೆಬ್ರವರಿ 16) ನಟ ದರ್ಶನ್ ಹುಟ್ಟುಹಬ್ಬವಿತ್ತು. ಆದರೆ ಈ ಬಾರಿ ಅಪ್ಪು ನಿಧನ ಹಾಗೂ ಇತರೆ ಕಾರಣಗಳಿಂದಾಗಿ ದರ್ಶನ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ ಹಾಗೂ ಮನೆಯ ಬಳಿ ಯಾರೂ ಬರಬಾರದೆಂದು ಅಭಿಮಾನಿಗಳಲ್ಲಿ ಮನವಿ ಸಹ ಮಾಡಿದ್ದರು.

ಹಲವು ಅಭಿಮಾನಿಗಳು ದರ್ಶನ್‌ ಮಾತಿನಂತೆ ದೂರದಿಂದಲೇ ಸಾಮಾಜಿಕ ಜಾಲತಾಣದ ಮೂಲಕ ದರ್ಶನ್ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದರು. ಆದರೆ ಹಲವು ಅಭಿಮಾನಿಗಳು ದರ್ಶನ್ ನಿವಾಸದ ಬಳಿ ಬಂದಿದ್ದರು. ಅಲ್ಲಿ ಘೋಷಣೆಗಳನ್ನು ಸಹ ಕೂಗಿದರು. ಆದರೆ ದರ್ಶನ್‌ ಮನೆಯಲ್ಲಿರಲಿಲ್ಲವಾದ್ದರಿಂದ ಅವರನ್ನು ಭೇಟಿಯಾಗಲಿಲ್ಲ.

ಇದೀಗ ನಟ ದರ್ಶನ್ ತಾವು ತಮ್ಮ ಹುಟ್ಟುಹಬ್ಬದ ದಿನ ತಮ್ಮ ಪ್ರೀತಿಯ ಅಭಿಮಾನಿಗಳನ್ನು ಭೇಟಿಯಾಗದೆ ಅವರಿಗೆ ನಿರಾಸೆ ಮಾಡಿದ್ದಕ್ಕೆ ಸಾಮಾಜಿಕ ಜಾಲತಾಣದ ಮೂಲಕ ಕ್ಷಮಾಪಣೆ ಕೋರಿದ್ದಾರೆ.