Sunday, August 9, 2026

BDA Apartments

Home Front Page ಕುಸ್ತಿ ಮಾಡಲು ವಿಧಾನಸೌಧ ಕಟ್ಟಿಲ್ಲ- ಕಾಂಗ್ರೆಸ್ ವಿರುದ್ಧ ಸಚಿವ ಆರ್.ಅಶೋಕ್ ಕಿಡಿ.

ಕುಸ್ತಿ ಮಾಡಲು ವಿಧಾನಸೌಧ ಕಟ್ಟಿಲ್ಲ- ಕಾಂಗ್ರೆಸ್ ವಿರುದ್ಧ ಸಚಿವ ಆರ್.ಅಶೋಕ್ ಕಿಡಿ.

ಬೆಂಗಳೂರು,ಫೆಬ್ರವರಿ,18,2022(www.justkannada.in):  ಸಚಿವ ಕೆ.ಎಸ್ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಸದನದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಈ ಕುರಿತು ಕಂದಾಯ ಸಚಿವ ಆರ್.ಅಶೋಕ್ ಕಿಡಿಕಾರಿದ್ದಾರೆ.

ಧರಣಿ ಕೈ ಬಿಡುವಂತೆ ಮನವಿ ಮಾಡಿದವು. ಆದರೆ ಕಾಂಗ್ರೆಸ್ ತನ್ನ ಹಠ ಬಿಡುತ್ತಿಲ್ಲ. ಕುಸ್ತಿ ಮಾಡಲು ವಿಧಾನಸೌಧ ಕಟ್ಟಿಲ್ಲ. ಕಾಂಗ್ರೆಸ್  ಜನರ ಧ್ವನಿಯಾಗಿರಬೇಕಿತ್ತು. ಆದರೆ ಪ್ರತಿಭಟನೆ ಮೂಲಕ  ಶಾಸಕರ ಹಕ್ಕು ಕಸಿಯುತ್ತಿದೆ.  ಧರಣಿ ಮೂಲಕ ದಬ್ಬಾಳಿಕೆ ದೌರ್ಜನ್ಯ ಮಾಡುತ್ತಿದೆ.  ಮೊದಲು ಕಾಂಗ್ರೆಸ್ ಧರಣಿ ಕೈಬಿಡಲಿ ಎಂದು ಸಚಿವ ಆರ್ ಅಶೋಕ್ ಆಗ್ರಹಿಸಿದರು.

Key words: congress-protest-minister-R.Ashok