Friday, September 25, 2026

BDA Apartments

Home Cinema  ಅಪ್ಪು ನಟನೆಯ ‘ಜೇಮ್ಸ್’ ಟೀಸರ್ ನೋಡಿ ಎದೆ ಕೊಯ್ದುಕೊಂಡ ಅಭಿಮಾನಿ.

 ಅಪ್ಪು ನಟನೆಯ ‘ಜೇಮ್ಸ್’ ಟೀಸರ್ ನೋಡಿ ಎದೆ ಕೊಯ್ದುಕೊಂಡ ಅಭಿಮಾನಿ.

ವಿಜಯನಗರ,ಫೆಬ್ರವರಿ,11,2022(www.justkannada.in):  ನಟ ಪವರ್ ಸ್ಟಾರ್ ಪುನೀತ್​ ರಾಜ್ ​ಕುಮಾರ್​  ನಟನೆಯ ಬಹುನಿರೀಕ್ಷಿತ ‘ಜೇಮ್ಸ್​’ ಸಿನಿಮಾದ ಟೀಸರ್​ ಇಂದು ಬಿಡುಗಡೆ ಆಗಿದ್ದು,ಈ ಟೀಸರ್​ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಿಲೀಸ್​ ಆದ ನಾಲ್ಕು ಗಂಟೆಯಲ್ಲಿ ಈ ಸಿನಿಮಾ ಬರೋಬ್ಬರಿ 24 ಲಕ್ಷ ಬಾರಿ ವೀಕ್ಷಣೆ ಕಂಡಿದೆ.

ಟೀಸರ್​ ನೋಡಿ ಅಭಿಮಾನಿಗಳು ಒಂದು ಕಡೆಯಲ್ಲಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ.  ತೆರೆಮೇಲೆ ಮಿಂಚುತ್ತಿರುವ ಪುನೀತ್​ ಇಂದು ನಮ್ಮ ಜತೆಗೆ ಇಲ್ಲ ಎಂದು ಅಭಿಮಾನಿಗಳು ಬೇಸರ ಹೊರಹಾಕುತ್ತಿದ್ದಾರೆ. ಈ ಮಧ್ಯೆ ಅಪ್ಪು ಅಭಿಮಾನಿಯೋರ್ವ ಜೇಮ್ಸ್ ಟೀಸರ್ ನೋಡಿ ಎದೆ ಕೊಯ್ದುಕೊಂಡ ಘಟನೆ  ವಿಜಯನಗರ ಜಿಲ್ಲೆಯಲ್ಲಿ ನಡೆದಿದೆ.ಅಪ್ಪು ನಟನೆಯ ‘ಜೇಮ್ಸ್’ ಟೀಸರ್ ನೋಡಿ ಎದೆ ಕೊಯ್ದುಕೊಂಡ ಅಭಿಮಾನಿ appu

ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನ ಹಳ್ಳಿಯ ಅಪ್ಪು ಅಭಿಮಾನಿ ಕನಕ ಎದೆ ಕೊಯ್ದುಕೊಂಡು ಅಪ್ಪು ಎಂದು ಬರೆದುಕೊಂಡಿದ್ದಾನೆ. ಟೀಸರ್ ನೋಡಿದ ಬಳಿಕ, ಅಪ್ಪು ಅಭಿಮಾನಿ ಹೊಸಪೇಟೆಯ ಕಿಚಡಿ ವಿಶ್ವ ಜತೆ ಸೆಲ್ಪಿ ಕ್ಲಿಕ್ಕಿಸಿಕೊಂಡು ಮನೆಗೆ ಹೋಗಿದ್ದಾನೆ. ನಂತರ ಮನೆಯಲ್ಲಿ ಯಾರು ಇಲ್ಲದ  ವೇಳೆ ಎದೆ ಕೊಯ್ದುಕೊಂಡ ಅಭಿಮಾನಿ ಕನಕ  ಅಪ್ಪು ಹೆಸರು ಬರೆದುಕೊಂಡಿದ್ದಾನೆ..

ಹೊಸಪೇಟೆಯ ಪುನೀತ್ ರಾಜ್‍ ಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಟೀಸರ್ ನೋಡಲು LED ಪರದೇ ವ್ಯವಸ್ಥೆ ಮಾಡಲಾಗಿತ್ತು.

Key words: James -Teaser –appu- fan