ಉಪಚುನಾವಣೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಕುರಿತು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಪ್ರತಿಕ್ರಿಯಿಸಿದ್ದು ಹೀಗೆ..?

ಬೆಂಗಳೂರು,ಆ,2,2019(www.justkannada.in):  ಕೆ.ಆರ್ ಪೇಟೆ ಉಪ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಸುವ ಸಾಧ್ಯತೆ ಇದೆ ಎಂದು ವರದಿಯಾಗಿರುವ ಹಿನ್ನೆಲೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು, ಕೆ.ಆರ್.ಪೇಟೆಯ ಮಾಹಿತಿ ನಾನು ಪಡೆಯುತ್ತಿದ್ದೇನೆ. ಈ ಕುರಿತು ಸಮಾಲೋಚನೆ ಮಾಡ್ತೇವೆ ಎಂದಿದ್ದಾರೆ.

ಬೆಂಗಳೂರಿನ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರು, ಉಪಚುನಾವಣೆಯಲ್ಲಿ ನಿಖಿಲ್ ಸ್ಪರ್ಧೆ ವಿಚಾರ. ಕೆ.ಆರ್.ಪೇಟೆಯ ಮಾಹಿತಿ ನಾನು ಪಡೆಯುತ್ತಿದ್ದೇನೆ. ಇದರಲ್ಲಿ ಯಾವುದೇ ಮುಚ್ಚುಮರೆಯಿಲ್ಲ. ನಾನು ಪ್ರತಿ ದಿನ ಎಲ್ಲವನ್ನೂ ನೋಡುತ್ತಿದ್ದೇನೆ. ಈ ಬಗ್ಗೆ ಸಮಾಲೋಚನೆ ಮಾಡುತ್ತೇವೆ. ನಿಖಿಲ್ ಯುವ ಘಟಕದ ಅಧ್ಯಕ್ಷ ಆಗಿದ್ದಾನೆ. ಪಕ್ಷ ಸಂಘಟನೆ ಕೆಲಸ‌ ಮಾಡಲಿ ಎಂದರು.

ಇನ್ನು ಉಪ ಚುನಾವಣೆ ಕುರಿತು ಕಾಂಗ್ರೆಸ್ ನಾಯಕರು ನಿನ್ನೆ ಸಭೆ ನಡೆಸಿದ್ದಾರೆ. ಅದನ್ನ ಮಾಧ್ಯಮಗಳಲ್ಲಿ ನೀಡಿದ್ದೇನೆ. ಉಪ ಚುನಾವಣೆ ವಿಚಾರ ಇನ್ನೂ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ. 17 ಕ್ಷೇತ್ರಗಳ ಉಪ ಚುನಾವಣೆ ವಿಚಾರ ಕಾಂಗ್ರೆಸ್ ಹೈಕಮಾಂಡ್ ಜೊತೆ ಮಾತಾಡಿ ತೀರ್ಮಾನ ಮಾಡ್ತೀವಿ ಎಂದು ಹೆಚ್.ಡಿ ದೇವೇಗೌಡರು ತಿಳಿಸಿದರು.

2014ರಲ್ಲಿ ಮೋದಿಯವರು ಅಧಿಕಾರಕ್ಕೆ ಬಂದಾಗ ಭ್ರಷ್ಟಾಚಾರ ನಿರ್ಮೂನೆ ಬಗ್ಗೆ ಪಣ ತೊಟ್ಟಿರುವುದಾಗಿ ಹೇಳಿದ್ರು. ಪಾಟ್ನಾದಲ್ಲಿ ಅವರು ಭಾಷಣ ಮಾಡಿದಾಗ ಆರ್‌ಎಸ್ಎಸ್ ಮೀಸಲಾತಿ ತೆಗೆಹಾಕಬೇಕು ಅಂತಾ ಒತ್ತಾಯ ಮಾಡಿತ್ತು. ಆರ್‌ಎಸ್ಎಸ್ ಮತ್ತು ಬಿಜೆಪಿ ನಡುವೆ ಹಲವಾರು ಭಿನ್ನಾಭಿಪ್ರಾಯಗಳು ಬಂದಿವೆ ಎಂದು ಹೆಚ್.ಡಿ ದೇವೇಗೌಡರು ತಿಳಿಸಿದರು.

16ನೇ ಲೋಕಸಭೆ ಮುಗಿಯುಲು ಆರು ದಿನ ಇದ್ದಾಗ ಮೀಸಲಾತಿ ಬಗ್ಗೆ ಮೋದಿಗೆ ನೆನಪಾಯಿತು. ಮುಂದುವರೆದ ಜಾತಿಯ ಬಡವರಿಗೆ ಮೀಸಲಾತಿ ನೀಡಲು ತೀರ್ಮಾನ ಮಾಡಿದ್ರು. ಹೀಗಾಗಿ ರಾಜ್ಯದಲ್ಲಿ ಸಿಎಂ ಆಗಿದ್ದ ಕುಮಾರಸ್ವಾಮಿ 25 ಕೋಟಿ ಹಣ ಮೀಸಲಿಟ್ಟರು. ಮೈತ್ರಿ ಸರ್ಕಾರ ಸವಿತಾ ಸಮಾಜಕ್ಕೆ 20 ಕೋಟಿ ಮೀಸಲಿಟ್ಟರು. ಸಣ್ಣ ಸಣ್ಣ ಸಮುದಾಯಕ್ಕೂ ಕುಮಾರಸ್ವಾಮಿ ಸರ್ಕಾರ ಹಣ ಮೀಸಲಿಟ್ಟಿತ್ತು. ಹಾಗಾಗಿ ಅದನ್ನ ನೆನೆದು ಸವಿತಾ ಸಮಾಜದವರು ಇಂದು ಪಕ್ಷಕ್ಕೆ ಬಂದ್ರು. ಈ ಪಕ್ಷ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಬೆಳೆಯಬೇಕು. ಪ್ರಾದೇಶಿಕ ಪಕ್ಷ ಹಲವು ಹೋರಾಟಗಳನ್ನು ಮಾಡುತ್ತಾ ಬಂದಿದೆ ಎಂದು ಹೆಚ್.ಡಿ ದೇವೇಗೌಡರು ಹೇಳಿದರು.

Key words: Former Prime Minister -HD Deve Gowda – by-election -Nikhil Kumaraswamy -contest.