Monday, August 10, 2026

BDA Apartments

Home Front Page ಲಕ್ಷ್ಮಣ್ ಸವದಿ ಡಿಕೆಶಿ ಸಂಪರ್ಕದಲ್ಲಿದ್ದಾರೆ ಎಂದ ಲಖನ್ ಜಾರಕಿಹೊಳಿಗೆ ಡಿ.ಕೆ ಶಿವಕುಮಾರ್ ತಿರುಗೇಟು.

ಲಕ್ಷ್ಮಣ್ ಸವದಿ ಡಿಕೆಶಿ ಸಂಪರ್ಕದಲ್ಲಿದ್ದಾರೆ ಎಂದ ಲಖನ್ ಜಾರಕಿಹೊಳಿಗೆ ಡಿ.ಕೆ ಶಿವಕುಮಾರ್ ತಿರುಗೇಟು.

ಬೆಂಗಳೂರು,ಜನವರಿ,29,2022(www.justkannada.in):   ಎಂಎಲ್ ಸಿ ಲಕ್ಷ್ಮಣ್ ಸವದಿ ಡಿಕೆ ಶಿವಕುಮಾರ್ ಅವರ ಸಂಪರ್ಕದಲ್ಲಿದ್ದಾರೆ ಎಂದು ಹೇಳಿಕೆ ನೀಡಿದ್ಧ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಅವರು ತಲೆ ಕೆಟ್ಟವರು ಮಾತನಾಡಿದ್ದಕ್ಕೆ ಉತ್ತರ ಕೊಡಲು ನಾನು ತಯಾರಿಲ್ಲ ಎಂದಿದ್ದಾರೆ.

ಇನ್ನು ಸಚಿವ ಸಂಫುಟ ವಿಸ್ತರಣೆ ಅವರ ಸರ್ಕಾರಕ್ಕೆ ಬಿಟ್ಟ ವಿಚಾರ. ಯಾರನ್ನ ಬೇಕಾದರೂ ತೆಗೆದುಕೊಳ್ಳಲಿ ಬಿಡಲಿ ಆದರೆ ದಿನಕ್ಕೊಬ್ಬರು ಒಂದೊಂದು ರೀತಿ ಹೇಳಿಕೆ ನೀಡುತ್ತಿದ್ದಾರೆ.   ಸಿಎಂ ಅವರ ಪಕ್ಷದ ಅಧ್ಯಕ್ಷರು ನಿಯಂತ್ರಿಸಲಾಗುತ್ತಿಲ್ಲ.  ಕೇಂದ್ರದ ನಾಯಕರಿಂದಲೇ ಕಂಟ್ರೋಲ್ ಮಾಡಲು ಆಗುತ್ತಿಲ್ಲ ಎಂದು ಡಿ.ಕೆ ಶಿವಕುಮಾರ್ ಲೇವಡಿ ಮಾಡಿದರು.

Key words: kpcc-president-DK Shivakumar