Sunday, September 13, 2026

BDA Apartments

Home Front Page ಮೇಕೆದಾಟು ಪಾದಯಾತ್ರೆ ಯಶಸ್ವಿಗಾಗಿ ಮನೆದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಡಿ.ಕೆ ಶಿವಕುಮಾರ್.

ಮೇಕೆದಾಟು ಪಾದಯಾತ್ರೆ ಯಶಸ್ವಿಗಾಗಿ ಮನೆದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಡಿ.ಕೆ ಶಿವಕುಮಾರ್.

ರಾಮನಗರ,ಜನವರಿ,8,2022(www.justkannada.in):  ವೀಕೆಂಡ್ ಕರ್ಫ್ಯೂ ನಡುವೆ ನಾಳೆಯಿಂದ ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಪಾದಯಾತ್ರೆ ನಡೆಸುತ್ತಿದ್ದು  ಈ ನಡುವೆ ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪಾದಯಾತ್ರೆ ಯಶಸ್ವಿಗೆ ವಿಶೇಷ ಪೂಜೆ ಸಲ್ಲಿಸಿದರು.

ಕರ್ಫ್ಯೂ ನಿಯಮ ಉಲ್ಲಂಘಿಸಿ ಕುಟುಂಬ ಸಮೇತರಾಗಿ ಕನಕಪುರದ ಕೆಂಕೇರಮ್ಮ ದೇಗುಲಕ್ಕೆ ತೆರಳಿ ಮನೆದೇವರಿಗೆ ಡಿ,ಕೆ ಶಿವಕುಮಾರ್ ವಿಶೇಷ ಪೂಜೆ ಸಲ್ಲಿಸಿದರು. ಪೂಜೆ ಸಲ್ಲಿಕೆ ಬಳಿಕ ಮಾತನಾಡಿದ ಅವರು, ನಮ್ಮ ಪಾದಯಾತ್ರೆ ತಡೆಯಲು ಮಾಡಿರುವ ಷಡ್ಯಂತ್ರ ಇದು ಏನೆ ಆದರೂ ಪಾದಯಾತ್ರೆ ಮಾಡುತ್ತೇವೆ. ನಾನೂ ಕೂಡ ರಿಯಾಲಿಟಿ ಚೆಕ್ ಮಾಡಿದ್ದೇನೆ. ರಾಮನಗರದಲ್ಲಿ ಯಾರು ಐಸಿಯುವಿನಲ್ಲಿ ಇದ್ದಾರೆ ತೋರಿಸಲಿ ಎಂದು ಸರ್ಕಾರಕ್ಕೆ  ಟಾಂಗ್ ನೀಡಿದರು.

ಬದುಕುತ್ತಿರುವ ಬಡವರನ್ನ ಇವರು ಸಾಯಿಸುತ್ತಿದ್ದಾರೆ ಅಷ್ಟೆ.ನಾನು ಸಿದ್ಧರಾಮಯ್ಯ ಪಾದಯಾತ್ರೆ ಮಾಡುತ್ತೇವೆ ನಮ್ಮ ಹಿಂದೆ ಕೆಲವು ಶಾಸಕರು ಬರುತ್ತಾರೆ. ಇಂದು ಸಂಜೆ ಹಿರಿಯ ನಾಯಕರ ಜತೆ ಚರ್ಚಿಸಿ ರೂಪುರೇಷೆ ಸಿದ್ಧಪಡಿಸುತ್ತೇವೆ ಎಂದರು.

Key words: DK Shivakumar- special -worship-success