Wednesday, August 19, 2026

BDA Apartments

Home Front Page ರಾಜ್ಯದಲ್ಲಿ ಕಾಂಗ್ರೆಸ್ ನಿಂದ ಮತ್ತೆ ಗೂಂಡಾಗಿರಿ- ಸಚಿವ ಆರ್.ಅಶೋಕ್ ವಾಗ್ದಾಳಿ.

ರಾಜ್ಯದಲ್ಲಿ ಕಾಂಗ್ರೆಸ್ ನಿಂದ ಮತ್ತೆ ಗೂಂಡಾಗಿರಿ- ಸಚಿವ ಆರ್.ಅಶೋಕ್ ವಾಗ್ದಾಳಿ.

ಬೆಂಗಳೂರು,ಜನವರಿ,3,2022(www.justkannada.in):  ಸಿಎಂ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲೇ ವೇದಿಕೆಯ ಮೇಲೆಯೇ ಸಚಿವ ಅಶ್ವಥ್ ನಾರಾಯಣ್ ಮತ್ತು ಸಂಸದ ಡಿ.ಕೆ ಸುರೇಶ್ ನಡುವಿನ ಕಿತ್ತಾಟ ಪ್ರಕರಣ ಸಂಬಂಧ ಕಾಂಗ್ರೆಸ್ ವಿರುದ್ಧ  ಕಂದಾಯ ಸಚಿವ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಮಾಧ್ಯಮಗಳ ಜತೆ ಇಂದು ಮಾತನಾಡಿದ ಸಚಿವ ಆರ್.ಅಶೋಕ್,  ದೇವರಾಜ ಅರಸು ಗುಂಡೂರಾವ್ ಕಾಲದಲ್ಲಿ ಗೂಂಡಾಗಿರಿಯಾಗಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಗೂಂಡಾಗಿರಿ ತರುತ್ತಿದೆ . ಮೊದಲು ಮಂತ್ರಿ ಭಾಷಣ ಮಾಡುವುದಕ್ಕೆ ಅವಕಾಶ ನೀಡಬೇಕಿತ್ತು.  ಸಚಿವರ ಮೇಲೆ ಹಲ್ಲೆ ಮಾಡೋಕೆ ಹೋಗಿದ್ದಾರೆ. ಇನ್ನು ಜನಸಾಮಾನ್ಯರನ್ನ ಬಿಡ್ತಾರಾ..?  ಎಂದು ಕಿಡಿಕಾರಿದರು.

Key words:  Congress –rowdism-state – Minister -R. Ashok