Tuesday, August 18, 2026

BDA Apartments

Home Front Page  ದೇವಸ್ಥಾನಗಳಿಗೆ ಸ್ವಾತಂತ್ರ ಕೊಟ್ರೆ ಕಾಂಗ್ರೆಸ್ ನವರಿಗೆ ಯಾಕೆ ಹೊಟ್ಟೆ ಉರಿ..? ಸಚಿವ ಕೆ.ಎಸ್ ಈಶ್ವರಪ್ಪ ಕಿಡಿ.

 ದೇವಸ್ಥಾನಗಳಿಗೆ ಸ್ವಾತಂತ್ರ ಕೊಟ್ರೆ ಕಾಂಗ್ರೆಸ್ ನವರಿಗೆ ಯಾಕೆ ಹೊಟ್ಟೆ ಉರಿ..? ಸಚಿವ ಕೆ.ಎಸ್ ಈಶ್ವರಪ್ಪ ಕಿಡಿ.

ಶಿವಮೊಗ್ಗ,ಜನವರಿ,1,2021(www.justkannada.in):  ಮುಜರಾಯಿ ಇಲಾಖೆಯಿಂದ ದೇವಸ್ಥಾನಗಳನ್ನ ಮುಕ್ತ ಮಾಡಲು ಚಿಂತನೆ ಮಾಡಿರುವ ರಾಜ್ಯ ಬಿಜೆಪಿ ಸರ್ಕಾರದ ನಡೆಯನ್ನ ಟೀಕಿಸಿರುವ ಕಾಂಗ್ರೆಸ್ ವಿರುದ್ಧ ಸಚಿವ ಕೆ.ಎಸ್ ಈಶ್ವರಪ್ಪ ಗುಡುಗಿದ್ದಾರೆ.

ಈ ಬಗ್ಗೆ ಶಿವಮೊಗ್ಗದಲ್ಲಿ ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ದೇವಸ್ಥಾನಗಳಿಗೆ ಸ್ವಾತಂತ್ರ ಕೊಟ್ರೆ ಕಾಂಗ್ರೆಸ್ ನವರಿಗೆ ಯಾಕೆ ಹೊಟ್ಟೆ ಉರಿ..? ಚರ್ಚ್ ಮಸೀದಿಗೆ ಸ್ವಾತಂತ್ರ ಇದೆ  ಮುಸ್ಲೀಂ ಕ್ರೈಸ್ತರ ಒಲೈಕೆಗಾಗಿ ಕಾಂಗ್ರೆಸ್ ನವರು ಮಾತನಾಡುತ್ತಿದ್ದಾರೆ.   ಗೋ ಹತ್ಯೆ  ತಡೆಯಲು ಅವರಿಂದ ಆಗಲಿಲ್ಲ. ಹಿಂದೂ ಕಾರ್ಯಕರ್ತರನ್ನ ಜೈಲಿಗೆ ಕಳಿಸಿದರು .

ಹಿಂದೂಗಳಿಗೆ ತೋಂದರೆ ಆದರೂ ಬೇಜಾರಿಲ್ಲ. ಬಲವಂತದ ಮತಾಂತರ ಮಾಢಿದ್ರೂ ಇವರಿಗೆ ಬೇಸರವಿಲ್ಲ. ಕಾಂಗ್ರೆಸ್ ಭಸ್ಮವಾಗುತ್ತೆ.  ಡಿಕೆ ಶಿವಕುಮಾರ್ ಬೇಕಾದರೇ ಮುಸ್ಲೀಂ ಅಥವಾ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಲಿ ಎಂದು ಕಿಡಿಕಾರಿದರು.

Key words: Temples – free – Congress-Minister -KS Eshwarappa