Tuesday, September 1, 2026

BDA Apartments

Home Front Page ಕಾಂಗ್ರೆಸ್ ಕನಸು ನನಸಾಗಲ್ಲ: ಮುಂದೆಯೂ ಬಿಜೆಪಿ ಅಧಿಕಾರಕ್ಕೆ- ಶಾಸಕ ಎಸ್.ಎ ರಾಮದಾಸ್.

ಕಾಂಗ್ರೆಸ್ ಕನಸು ನನಸಾಗಲ್ಲ: ಮುಂದೆಯೂ ಬಿಜೆಪಿ ಅಧಿಕಾರಕ್ಕೆ- ಶಾಸಕ ಎಸ್.ಎ ರಾಮದಾಸ್.

ಮೈಸೂರು,ಜನವರಿ,1,2022(wwwww.justkannada.in): ಹಿಂದೂ ದೇವಾಲಯಗಳನ್ನ ಮುಜರಾಯಿ ಇಲಾಖೆ ವ್ಯಾಪ್ತಿಯಿಂದ ಮುಕ್ತಗೊಳಿಸುವ ನಿರ್ಧಾರವನ್ನ  ಶಾಸಕ ಎಸ್.ಎ ರಾಮದಾಸ್ ಸ್ವಾಗತಿಸಿದ್ದಾರೆ.

ಈ ಕುರಿತು ಇಂದು ಮೈಸೂರಿನಲ್ಲಿ ಮಾತನಾಡಿದ ಶಾಸಕ ಎಸ್.ಎ ರಾಮದಾಸ್, ಹಿಂದೂ ದೇವಾಲಯಗಳನ್ನು ಮುಜರಾಯಿ ಇಲಾಖೆಯ ವ್ಯಾಪ್ತಿಯಿಂದ ಹೊರಗಿಡಲು ಮುಂದಾಗಿರುವ ಸರ್ಕಾರದ ನಿಲುವು ಸ್ವಾಗತಾರ್ಹವಾದುದು. ಆಯಾ ಪ್ರದೇಶದ ದೇಗುಲಗಳ ಆದಾಯವನ್ನು ಅದೇ ಪ್ರದೇಶದ ಅಭಿವೃದ್ಧಿಗೆ ಬಳಸಿಕೊಳ್ಳಬೇಕೆಂಬ ಉದ್ದೇಶದಿಂದ ಈ ಕ್ರಮಕ್ಕೆ ಸರ್ಕಾರ ಮುಂದಾಗಿದೆ. ಕಾಂಗ್ರೆಸ್ ನವರು ರಾಜಕೀಯ ಕಾರಣಗಳಿಗಾಗಿ ವಿರೋಧ ಮಾಡ್ತಿದಾರೆ. ಕಾಂಗ್ರೆಸ್ ನವರು ಮುಂದೆ ಅಧಿಕಾರಕ್ಕೆ ಬರುವ ಕನಸು ಕಾಣ್ತಿದಾರೆ. ಕಾಂಗ್ರೆಸ್ ನವರ ಕನಸು ನನಸಾಗುವುದಿಲ್ಲ. ಮುಂದಿನ ಚುನಾವಣೆಯಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೈಸೂರು-ಚಾಮರಾಜನಗರ ವಿಧಾನ ಪರಿಷತ್ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಸೋಲು ನಮಗೆಲ್ಲಾ ಪಾಠವಾಗಿದೆ. ಗೆದ್ದೇ ಗೆಲ್ಲುತ್ತೇವೆಂಬ ಅತಿಯಾದ ಆತ್ಮ ವಿಶ್ವಾಸವೂ ಸೋಲಿಗೆ ಕಾರಣವಿರಬಹುದು. ಮೊದಲ ಮತ್ತು ಎರಡನೇ ಪ್ರಾಶಸ್ತ್ಯದ ಮತಗಳ ಮಹತ್ವವನ್ನು ಸರಿಯಾಗಿ ಅರಿಯದೇ ಹೋದದ್ದೂ ಸಹ ಸೋಲಿಗೆ ಕಾರಣವಿರಬಹುದು. ಒಟ್ಟಾರೆಯಾಗಿ ಬಿಜೆಪಿ ಅಭ್ಯರ್ಥಿಯ ಸೋಲಿನ ಹೊಣೆಯನ್ನು ಎಲ್ಲರೂ ಹೊರುತ್ತೇವೆ ಎಂದು ರಾಮದಾಸ್ ತಿಳಿಸಿದರು.

ಪಕ್ಷದಲ್ಲಿ ನನಗೆ ಹೆಚ್ಚಿನ ಅವಕಾಶ ಸಿಗೋದು ಬಿಡೋದು ಪಕ್ಷಕ್ಕೇ ಸೇರಿದ್ದು.  ಮಂತ್ರಿಗೂ, ಶಾಸಕನಿಗೂ ಯಾವುದೇ ವ್ಯತ್ಯಾಸವಿಲ್ಲ. ಶಾಸಕನಾಗಿದ್ದುಕೊಂಡು ಸಹ ಅಭಿವೃದ್ಧಿ ಕಾರ್ಯಗಳನ್ನು ಮಾಡಬಹುದಾಗಿದೆ. ಸಚಿವ ಸ್ಥಾನ ನೀಡೋದು ಬಿಡೋದು ಪಕ್ಷಕ್ಕೆ ಸೇರಿದ ವಿಚಾರ. ಕಳೆದ ಬಾರಿ ನನಗೆ ಸಚಿವ ಸ್ಥಾನ ಸಿಗದಂತೆ ಮಾಡಿದ ಆ ಒಂದು ದೂರವಾಣಿ ಕರೆಯೇ ನನಗೆ ಮತ್ತಷ್ಟು ಹುರುಪಿನಿಂದ ಕೆಲಸ ಮಾಡಲು ಉತ್ತೇಜನ ನೀಡಿತು ಎಂದು ಶಾಸಕ ರಾಮದಾಸ್ ಹೇಳಿದರು.

ಜನವರಿ 4 ರಿಂದ 8 ರವರೆಗೆ  ಬೃಹತ್ ಕೌಶಲ್ಯಾಭಿವೃದ್ದಿ ಹಾಗೂ ಉದ್ಯೋಗ ನೋಂದಾವಣೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಸರ್ಕಾರಿ ಹಾಗೂ ಖಾಸಗಿ ಕಂಪನಿಗಳ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಉದ್ಯೋಗ ನೋಂದಾವಣೆ ಕಾರ್ಯಕ್ರಮ. ಉದ್ಯೋಗ ಸೃಷ್ಟಿಗಾಗಿ ಆಯೋಜಿಸುತ್ತಿರುವ ಕಾರ್ಯಕ್ರಮ ಇದಾಗಿದೆ ಎಂದರು.

Key words: Congress -dream – not – BJP –power-mysore-MLA -SA Ramadas.