Friday, August 21, 2026

BDA Apartments

Home Front Page ಟಿಪ್ಪು ಜಯಂತಿ ರದ್ಧು ಮಾಡಿದ್ದಕ್ಕೆ ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಮಾಜಿ ಸಚಿವ ಜಮೀರ್ ಅಹ್ಮದ್...

ಟಿಪ್ಪು ಜಯಂತಿ ರದ್ಧು ಮಾಡಿದ್ದಕ್ಕೆ ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಆಕ್ರೋಶ…

ಬೆಂಗಳೂರು,ಜು,30,2019(www.justkannada.in) ಟಿಪ್ಪು ಜಯಂತಿ ಆಚರಣೆಯನ್ನ ರದ್ದು ಮಾಡಿ ಆದೇಶ ಹೊರಡಿಸಿದ್ದಕ್ಕೆ ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟಿಪ್ಪು ಜಯಂತಿ ರದ್ದತಿ ವಿಚಾರ ಕುರಿತು ಮಾಧ್ಯಮದ ಜತೆ ಮಾತನಾಡಿದ ಶಾಸಕ ಜಮೀರ್ ಅಹ್ಮದ್ ಖಾನ್,  ಸರ್ಕಾರ ಟಿಪ್ಪು ಜಯಂತಿಯನ್ನ ರದ್ದುಗೊಳಿಸಿದ ತಕ್ಷಣ ಆಚರಣೆ ನಿಲ್ಲಲ್ಲ. ಅದಕ್ಕಿಂತ ವಿಜೃಂಬಣೆಯಿಂದ ನಾವು ಆಚರಣೆ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿ ಆಚರಣೆ ನಿಲ್ಲಲ್ಲ.  ಬಿಜೆಪಿಯಿಂದಲೂ ಸಾಧ್ಯವಿಲ್ಲ. ಯಾರಿಂದಲೂ ಸಾಧ್ಯವಿಲ್ಲ ಎಂದು ಕಿಡಿಕಾರಿದರು.

ಹಾಗೆಯೇ ಹಿಂದೂಸ್ತಾನದಲ್ಲಿ ಟಿಪ್ಪು ಅಭಿಮಾನಿಗಳು ಹೆಚ್ಚಾಗುತ್ತಿದ್ದಾರೆ.  ಟಿಪ್ಪು ಜಯಂತಿ ರದ್ಗತಿ ಬಗ್ಗೆ ರೋಷನ್ ಬೇಗ್ ಅವರನ್ನ ಕೇಳಬೇಕು. ಕಾಂಗ್ರೆಸ್ ಬಿಟ್ಟು  ಬಿಜೆಪಿಗೆ ಹೊರಟಿದ್ದಾರಲ್ಲ ಅವರನ್ನೇ ಕೇಳಬೇಕು ಎಂದು ಜಮೀರ್ ಜಾಟಿ ಬೀಸಿದರು.

Key words: Former minister – Jameer Ahmed Khan – outraged –Cancel-tippu jayanthi-bjp gornament