Sunday, August 23, 2026

BDA Apartments

Home Front Page ಓಮೈಕ್ರಾನ್ ಆತಂಕ ಬಿಡಿ, ತಪ್ಪದೇ ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂದ ಅಮೆರಿಕಾ ಅಧ್ಯಕ್ಷ ಬೈಡನ್

ಓಮೈಕ್ರಾನ್ ಆತಂಕ ಬಿಡಿ, ತಪ್ಪದೇ ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂದ ಅಮೆರಿಕಾ ಅಧ್ಯಕ್ಷ ಬೈಡನ್

ಬೆಂಗಳೂರು, ಡಿಸೆಂಬರ್ 17, 2021 (www.justkannada.in): ಕೋವಿಡ್ ಲಸಿಕೆ ಪಡೆಯುವ ಮೂಲಕ ಓಮೈಕ್ರಾನ್ ಸೋಂಕಿನಿಂದ ರಕ್ಷಣೆ ಪಡೆಯಲು ಸಾಧ್ಯ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ತಿಳಿಸಿದ್ದಾರೆ.

ಅಮೆರಿಕದಲ್ಲಿ ಓಮೈಕ್ರಾನ್ ಪ್ರಕರಣ ಹೆಚ್ಚುತ್ತಿರುವುದು ಕಳವಳಕ್ಕೆ ಕಾರಣವಾಗಿದ್ದು, ಈ ಕುರಿತು ಮಾತನಾಡಿದ ಬೈಡನ್, ಆತಂಕ ಬಿಟ್ಟು ಲಸಿಕೆ ಪಡೆಯುವಂತೆ ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಬೈಡನ್, ಅರ್ಹತೆಯುಳ್ಳ ಎಲ್ಲರೂ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ಬೈಡನ್ ಮನವಿ ಮಾಡಿದ್ದಾರೆ.

16 ವರ್ಷ ಮೇಲ್ಪಟ್ಟವರಾಗಿದ್ದರೆ ಮತ್ತು ಆರು ತಿಂಗಳ ಹಿಂದೆ ಲಸಿಕೆಯನ್ನು ಪಡೆದಿದ್ದರೆ ಬೂಸ್ಟರ್ ಡೋಸ್ ಹಾಕಿಸಿಕೊಳ್ಳಿ ಎಂದು ಮಾಹಿತಿ ನೀಡಿದ್ದಾರೆ.