Sunday, August 23, 2026

BDA Apartments

Home Front Page ಮೈಸೂರು ವಿಶ್ವವಿದ್ಯಾಲಯದ ಸಿಸ್ಟ್‌’ನಲ್ಲಿ ನಾನಾ ಕೋರ್ಸಿಗೆ ಅರ್ಜಿ ಆಹ್ವಾನ

ಮೈಸೂರು ವಿಶ್ವವಿದ್ಯಾಲಯದ ಸಿಸ್ಟ್‌’ನಲ್ಲಿ ನಾನಾ ಕೋರ್ಸಿಗೆ ಅರ್ಜಿ ಆಹ್ವಾನ

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಸಿಸ್ಟ್ ವಿವಿಧ ಕೋರ್ಸ್‌ಗಳ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಿದೆ.

ಮಾಸ್ಟರ್ ಆಫ್ ಸೈನ್ಸ್ ಇನ್ ಅನಿಮೇಶನ್ (ಎಂಸಿಎ)ಗೆ ಬಿಎಸ್ಸಿ (ಸಿಎಸ್),  ಬಿಸಿಎ, ಬಿಟೆಕ್, ಬಿಇ, ಬಿಎ, ಬಿಕಾಂನಲ್ಲಿ ಕಂಪ್ಯೂಟರ್ ಸೈನ್ಸ್ ವಿಷಯ ಓದಿರುವವರು ಅರ್ಜಿ ಹಾಕಬಹುದು.

ಅದೇ ರೀತಿ ಮಾಸ್ಟರ್. ಸೈನ್ಸ್ ಅಂಡ್ ಟೆಕ್ನಾಲಜಿ (ಎಂಎಸ್ಸಿ-ಐಟಿ) ಗೆ ಬಿಎಸ್ಸಿ, ಬಿಸಿಎ, ಬಿಟೆಕ್, ಬಿಇನಲ್ಲಿ ಗಣಿತ ವಿಷಯವನ್ನು ಓದಿರುವ ಅಥವಾ ಡಿಪ್ಲೋಮಾ ಇನ್ ಕಂಪ್ಯೂಟರ್ ಅಪ್ಲಿಕೇಶನ್ ಮಾಡಿರುವವರು ಅರ್ಜಿ ಹಾಕಬಹುದು.

ಅಂತೆಯೇ ಸಾಫ್ಟ್ ವೇರ್ ಡೆವಲಪ್‌ಮೆಂಟ್, ಮಲ್ಟಿ ಮೀಡಿಯಾ ಟೆಕ್ನಾಲಜಿ, ಜಿಯೋ ಇನ್ಫರ್ಮೇಟಿಕ್ಸ್‌, ನೆಟ್ ವರ್ಕಿಂಗ್ ಅಂಡ್ ಸೈಬರ್ ಸೆಕ್ಯೂರಿಟಿಯಲ್ಲಿ ಒಂದು ವರ್ಷದ ಪೋಸ್ಟ್ ಡಿಪ್ಲೋಮಾ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಯಾವುದೇ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಅದೇ ರೀತಿ ಪಿಯುಸಿ ಅಥವಾ ಎಸ್ಸೆಸ್ಸೆಲ್ಸಿ ಮುಗಿಸಿರುವವರು ಒಂದು ವರ್ಷದ ಡಿಪ್ಲೋಮಾಗೂ ಅರ್ಜಿ ಸಲ್ಲಿಸಬಹುದು.