Friday, August 14, 2026

BDA Apartments

Home Cinema ನಟ ರಜನಿಕಾಂತ್ ಹುಟ್ಟುಹಬ್ಬ ಆಚರಣೆ: 71 ಅಡಿ ಉದ್ದದ ಕೇಕ್ ಕತ್ತರಿಸಿ ಅಭಿಮಾನಿಗಳಿಂದ ಸಂಭ್ರಮ.

ನಟ ರಜನಿಕಾಂತ್ ಹುಟ್ಟುಹಬ್ಬ ಆಚರಣೆ: 71 ಅಡಿ ಉದ್ದದ ಕೇಕ್ ಕತ್ತರಿಸಿ ಅಭಿಮಾನಿಗಳಿಂದ ಸಂಭ್ರಮ.

ಬೆಂಗಳೂರು, ಡಿಸೆಂಬರ್ 13, 2021 (www.justkannada.in): ತಮಿಳು ಚಿತ್ರರಂಗದ ಸೂಪರ್‌ ಸ್ಟಾರ್ ರಜಿನಿಕಾಂತ್ ಅವರು ಡಿಸೆಂಬರ್ 12, ಭಾನುವಾರ, ಅಂದರೆ ನಿನ್ನೆ ತಮ್ಮ 71ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

ದೇಶದಾದ್ಯಂತ ಅಭಿಮಾನಿಗಳು ತಲೈವಾಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು. ಬೆಂಗಳೂರಿನಲ್ಲಿ ರಜನಿ ಅವರ ಅಭಿಮಾನಿಗಳು ತಮ್ಮ ಮೆಚ್ಚಿನ ನಟನ ಹುಟ್ಟಿದ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿದರು.

ಹೌದು, ಬೆಂಗಳೂರಿನಲ್ಲಿ ತಲೈವಾ ರಜನಿಕಾಂತ್ ಅವರ ಅಭಿಮಾನಿಗಳು, ರಜನಿ ಅವರ ೭೧ನೇ ಹುಟ್ಟು ಹಬ್ಬದ ದಿನಾಚರಣೆಯಂದು ೭೧ ಅಡಿ ಉದ್ದದ, ೨೦೦ ಕೆಜಿ ತೂಕದ ಕೇಕ್ ಅನ್ನು ಕತ್ತರಿಸಿ ಸಂಭ್ರಮಿಸಿದರು. ಈ ಕಾರ್ಯಕ್ರಮ ಫ್ರೀಡಂ ಪಾರ್ಕ್ ನಲ್ಲಿ ನಡೆಯಿತು.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Actor-Rajinikanth’s- birthday –celebration-71 foot-long- cake – fans.