Monday, October 5, 2026

BDA Apartments

ನಾಡು ಕಂಡ ಶ್ರೇಷ್ಠ ಮುತ್ಸದ್ಧಿ ರಾಜಕಾರಣಿ ಎಸ್.ಎಂ ಕೃಷ್ಣ: ಅವರ ಆಡಳಿತ ವೈಖರಿ ರ...
Home Front Page ಎಸಿಬಿ ದಾಳಿ: ಪಿಡಬ್ಲೂಡಿ ಜೆಇ ಮನೆಯ ಪೈಪ್ ನಲ್ಲಿ ಲಕ್ಷಾಂತರ ರೂ.ಹಣ ಪತ್ತೆ . 

ಎಸಿಬಿ ದಾಳಿ: ಪಿಡಬ್ಲೂಡಿ ಜೆಇ ಮನೆಯ ಪೈಪ್ ನಲ್ಲಿ ಲಕ್ಷಾಂತರ ರೂ.ಹಣ ಪತ್ತೆ . 

ಕಲಬುರ್ಗಿ,ನವೆಂಬರ್,24,2021( www.justkannada.in):  ರಾಜ್ಯದ 68 ಕಡೆಗಳಲ್ಲಿ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು  ಭ್ರಷ್ಟ ಅಧಿಕಾರಿಗಳ ಮನೆಯಲ್ಲಿ ದಾಖಲೆ ಪರಿಶೀಲನೆ ನಡೆಸುತ್ತಿದ್ದು ಈ ಮಧ್ಯೆ ಕಲ್ಬರ್ಗಿಯಲ್ಲಿ ಲೋಕೋಪಯೋಗಿ ಇಲಾಖೆಯ ಜೆಇ ಶಾಂತನಗೌಡ ಅವರ ನಿವಾಸದಲ್ಲಿ ಪೈಪ್ ನಲ್ಲಿ ಅಡಗಿಸಿಟ್ಟಿದ್ದ ಲಕ್ಷಾಂತರ ರೂ. ಹಣವನ್ನ ಪತ್ತೆ ಮಾಡಿದ್ದಾರೆ.

ಎಸಿಬಿ ದಾಳಿಗೆ ಹೆದರಿ ಲೋಕೋಪಯೋಗಿ ಇಲಾಖೆಯ ಜೆಇ ಶಾಂತನಗೌಡ ಹಣವನ್ನ ಕವರ್ ನಲ್ಲಿ ಹಾಕಿ ಮನೆಗೆ ಮಳೆ ನೀರು ಬರುವ ಪೈಪ್ ಒಳಗೆ ಸುರಿದಿದ್ದರು. ಇದೀಗ ಎಸಿಬಿ ಅಧಿಕಾರಿಗಳು ಪ್ಲಂಬರ್ ಕರೆಸಿ, ಮನೆಯ ಹೊರಭಾಗದ ಪೈಪ್ ಕತ್ತರಿಸಿ ಹಣವನ್ನ ಹೊರತೆಗೆದಿದ್ದಾರೆ ಈ ವೇಳೆ 25 ಲಕ್ಷಕ್ಕೂ ಅಧಿಕ ಹಣ ಪತ್ತೆಯಾಗಿದೆ ಎನ್ನಲಾಗಿದೆ.

ಕಲಬುರ್ಗಿಯ ಪಿಡಬ್ಲೂಡಿ ಜೆಇ ಶಾಂತಗೌಡ ಅವರ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ ಇಂದು ದಿಢೀರ್ ಅವರ ಕಲಬುರ್ಗಿ ನಗರದ ಗುಬ್ಬಿ ಕಾಲೋನಿಯಲ್ಲಿನ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ದಾಳಿಯ ವೇಳೆಯಲ್ಲಿ ಅಪಾರ ಪ್ರಮಾಣದ ಅಕ್ರಮ ಆಸ್ತಿ, ಪಾಸ್ತಿಯನ್ನು ಎಸಿಬಿ ಅಧಿಕಾರಿಗಳ ತಂಡ ಪತ್ತೆ ಹಚ್ಚಿದೆ ಎನ್ನಲಾಗಿದೆ.

Key words: ACB- attack- PWD JE- home- pipe-money