Sunday, September 13, 2026

BDA Apartments

ಲಾಹೋರ್: ದಾತಾ ದರ್ಬಾರ್ ಹೊರಗೆ ಆತ್ಮಾಹುತಿ ಬಾಂಬ್ ದಾಳಿ, 9 ಸಾವು BDA JK_Adv BDA Adv
Home Crime ಲಾಹೋರ್: ದಾತಾ ದರ್ಬಾರ್ ಹೊರಗೆ ಆತ್ಮಾಹುತಿ ಬಾಂಬ್ ದಾಳಿ, 9 ಸಾವು

ಲಾಹೋರ್: ದಾತಾ ದರ್ಬಾರ್ ಹೊರಗೆ ಆತ್ಮಾಹುತಿ ಬಾಂಬ್ ದಾಳಿ, 9 ಸಾವು

 

ಲಾಹೋರ್, ಮೇ 08, 2019 : ಲಾಹೋರ್‌ನಲ್ಲಿರುವ ಸೂಫಿ ದೇವಾಲಯದ ಹೊರಗೆ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ಐವರು ಪೊಲೀಸರು ಸೇರಿದಂತೆ 9 ಮಂದಿ ಸಾವಿಗೀಡಾಗಿದ್ದಾರೆ. ಈ ಘಟನೆಯಲ್ಲಿ 25 ಮಂದಿಗೆ ಗಾಯಗಳಾಗಿವೆ ಎಂದು ಪಾಕಿಸ್ತಾನಿ ಪೊಲೀಸರು ಹೇಳಿದ್ದಾರೆ.
ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ ಪಂಜಾಬ್ ಪ್ರಾಂತ್ಯದಲ್ಲಿರುವ ದಾತಾ ದರ್ಬಾರ್‌ನ ಗೇಟ್ 2ರ ಬಳಿ ಬೆಳಗ್ಗೆ 8.45ಕ್ಕೆ ಬಾಂಬ್ ಸ್ಫೋಟವಾಗಿದೆ.
ಇದು ಆತ್ಮಾಹುತಿ ದಾಳಿಯಾಗಿದ್ದು, ದಾತಾ ದರ್ಬಾರ್ ಹೊರಗಡೆ ಇದ್ದ ಸಶಸ್ತ್ರ ಪಡೆಯ ವಾಹನವನ್ನು ಗುರಿಯಾಗಿರಿಸಿ ಆತ್ಮಾಹುತಿ ದಾಳಿ ನಡೆದಿದೆ ಎಂದು ಪಂಜಾಬ್ ಐಜಿಪಿ ಆರಿಫ್ ನವಾಜ್ ಹೇಳಿದ್ದಾರೆ.

9 ವ್ಯಕ್ತಿಗಳು ಸಾವಿಗೀಡಾಗಿದ್ದಾರೆ. 6 ಮಂದಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅವರ ಪ್ರಾಣ ಉಳಿಸಲು ನಾವು ಶತಾಯಗತಾಯ ಪ್ರಯತ್ನಿಸುತ್ತಿದ್ದೇವೆ ಎಂದು ಮೆಯೊ ಹಾಸ್ಪಿಟಲ್ ಮೆಡಿಕಲ್ ಸೂಪರಿಟೆಂಡೆಂಟ್ ಹೇಳಿದ್ದಾರೆ.
ಏತನ್ಮಧ್ಯೆ, ದಾತಾ ದರ್ಬಾರ್ ಹೊರಗಡೆ ನಡೆದ ಬಾಂಬ್ ದಾಳಿಯನ್ನು ಖಂಡಿಸಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್, ದಾಳಿ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ವರದಿ ಕೇಳಿದ್ದಾರೆ ಎಂದು ರೇಡಿಯೊ ಪಾಕಿಸ್ತಾನ್ ವರದಿ ಮಾಡಿದೆ.
ದಾಳಿ ನಂತರ ದಾತಾ ದರ್ಬಾರ್‌ಗೆ ಪ್ರವೇಶ ನಿಷೇಧಿಸಲಾಗಿದೆ.

ಕೃಪೆ : ಪ್ರಜಾವಾಣಿ

bomb blast in lahore, pakisthan. 9 killed