Saturday, August 1, 2026

BDA Apartments

Home Front Page ಪ್ರಜಾಪ್ರಭುತ್ವ ಅನ್ನೋದು ನಂಬರ್ ಗೇಮ್: ಬಿಎಸ್ ವೈ ಬಹುಮತ ಸಾಬೀತು ಮಾಡ್ತಾರೆ- ಸಂಸದ ಪ್ರತಾಪ್ ಸಿಂಹ...

ಪ್ರಜಾಪ್ರಭುತ್ವ ಅನ್ನೋದು ನಂಬರ್ ಗೇಮ್: ಬಿಎಸ್ ವೈ ಬಹುಮತ ಸಾಬೀತು ಮಾಡ್ತಾರೆ- ಸಂಸದ ಪ್ರತಾಪ್ ಸಿಂಹ ವಿಶ್ವಾಸ…

ಮೈಸೂರು,ಜು,27,2019(www.justkannada.in) ಪ್ರಜಾಪ್ರಭುತ್ವ ಅನ್ನೋದು ನಂಬರ್ ಗೇಮ್ ಇದ್ದಂತೆ. ಸೋಮವಾರ ಯಡಿಯೂರಪ್ಪ ಬಹುಮತ ಸಾಬೀತು ಮಾಡುತ್ತಾರೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ವಿಶ್ವಾಸ ವ್ಯಕ್ತಪಡಿಸಿದರು.

ಮೆಮು ರೈಲು ಉದ್ಘಾಟಿಸಿ  ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಬೇಕು ಎನ್ನುವುದು ಜನರ ಆಶಯವಾಗಿತ್ತು. ಆದರೆ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬಂದವು. ಅವರು ಅಭಿವೃದ್ಧಿ ಕಾರ್ಯ ಮಾಡಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ. ಸ್ವ ಹಿತಾಸಕ್ತಿಯೇ ಮುಖ್ಯವಾಗಿ ಜಗಳ ಮಾಡಿಕೊಂಡರು‌. ಇದರಿಂದಾಗಿ ಯಡಿಯೂರಪ್ಪ ಅವರು ಮತ್ತೆ ಸಿಎಂ ಆಗಿದ್ದಾರೆ‌ ಎಂದು ತಿಳಿಸಿದರು.

ಸ್ಪೀಕರ್ ನಿರ್ಧಾರ, ನಂಬರ್ ಗೇಮ್ ಯಾವುದರ ಬಗ್ಗೆಯೂ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಅದನ್ನೆಲ್ಲ ನೋಡಿಕೊಳ್ಳಲು ನಮ್ಮ ಪಕ್ಷದ ಹಿರಿಯ ನಾಯಕರು ಇದ್ದಾರೆ. ಪ್ರತಿಪಕ್ಷಕ್ಕಿಂತ ಒಂದು ಸಂಖ್ಯೆ ಹೆಚ್ಚು ಇದ್ದಾರೆ ಸಾಕು. ಬಹುಮತ ಸಾಬೀತು ಮಾಡಲು ಸಮಸ್ಯೆ ಆಗುವುದಿಲ್ಲ ಎಂದು ಪ್ರತಾಪ್ ಸಿಂಹ ತಿಳಿಸಿದರು.

Key words:  BS Yeddyurappa- prove- majority-MP Pratap simha